ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣ ವಿವಾದಕ್ಕೆ ಸಂಬಂಧಿಸಿ ಪಾಕ್ ಕ್ರಿಕೆಟಿಗ ನಸೀಮ್ ಶಾ ಮೇಲೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (PCB) ಕಠಿಣ ಕ್ರಮ ಕೈಗೊಂಡಿದೆ.
ಒಂದು ಪೋಸ್ಟ್ನ ಕಾರಣಕ್ಕೆ ಅವರಿಗೆ 2 ಕೋಟಿ ಪಾಕಿಸ್ತಾನ ರೂಪಾಯಿ ದಂಡ ವಿಧಿಸಲಾಗಿದ್ದು, ಇದು ಪಾಕ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಆರ್ಥಿಕ ದಂಡವೆಂದು ವರದಿಯಾಗಿದೆ.
ವಿವಾದಕ್ಕೆ ಕಾರಣವಾದ ಪೋಸ್ಟ್ನಲ್ಲಿ ಪಂಜಾಬ್ ಮುಖ್ಯಮಂತ್ರಿ ಮರಿಯಮ್ ನವಾಝ್ ಕುರಿತು ವ್ಯಂಗ್ಯಾತ್ಮಕ ಟಿಪ್ಪಣಿ ಮಾಡಲಾಗಿತ್ತು. ನಂತರ ಆ ಪೋಸ್ಟ್ ಡಿಲೀಟ್ ಆಗಿದ್ದು, ಖಾತೆ ಹ್ಯಾಕ್ ಆಗಿತ್ತು ಎಂದು ನಸೀಮ್ ಶಾ ಸ್ಪಷ್ಟನೆ ನೀಡಿದ್ದರು. ಆದರೆ, ಪಿಸಿಬಿ ಶಿಸ್ತು ಸಮಿತಿ ಈ ವಾದವನ್ನು ಒಪ್ಪದೆ, ಕೇಂದ್ರ ಒಪ್ಪಂದದ ಹಲವು ನಿಯಮಗಳ ಉಲ್ಲಂಘನೆ ನಡೆದಿದೆ ಎಂದು ತೀರ್ಮಾನಿಸಿದೆ.
ಇದನ್ನೂ ಓದಿ:
ವಿಚಾರಣೆಯ ವೇಳೆ ನಸೀಮ್ ಬೇಷರತ್ ಕ್ಷಮೆಯಾಚನೆ ಸಲ್ಲಿಸಿದ್ದರೂ, ಮಂಡಳಿ ಆರ್ಥಿಕ ದಂಡ ವಿಧಿಸುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಕೆಲ ವರದಿಗಳ ಪ್ರಕಾರ, ಎರಡು ವರ್ಷಗಳ ನಿಷೇಧದ ಕುರಿತು ಚರ್ಚೆ ನಡೆದಿದ್ದರೂ, ಕೊನೆಯಲ್ಲಿ ದಂಡಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.
ಇನ್ನೊಂದು ಪ್ರಮುಖ ಬೆಳವಣಿಗೆಯಲ್ಲಿ, ಈ ಘಟನೆಯ ಬಳಿಕ ನಸೀಮ್ ತಮ್ಮ ಸೋಷಿಯಲ್ ಮೀಡಿಯಾ ಸಲಹೆಗಾರರನ್ನು ಕೆಲಸದಿಂದ ತೆಗೆದುಹಾಕಿದ್ದಾರೆ. ಪಿಸಿಬಿ ಕೂಡ ಆ ವ್ಯಕ್ತಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಸದ್ಯ ಪಿಎಸ್ಎಲ್ನಲ್ಲಿ ರಾವಲ್ಪಿಂಡಿ ತಂಡದ ಪರ ಆಡುತ್ತಿರುವ ನಸೀಮ್ಗೆ ಈ ಘಟನೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.



