Wednesday, July 6, 2022

Latest Posts

ರೈತರು ಬಲಿಷ್ಠರಾದಾಗ ರಾಷ್ಟ್ರ ಅಭಿವೃದ್ಧಿ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಮಂತ್ರಿ ಕಿಸಾನ್​ ಸಮ್ಮನ್​ ನಿಧಿ ಸೇರಿ ಇತರ ಯೋಜನೆಗಳು ದೇಶಾದ್ಯಂತ ಕೋಟ್ಯಂತರ ರೈತರಿಗೆ ಹೊಸ ಶಕ್ತಿ ತಂಬಿದೆ. ರೈತರ ಕಲ್ಯಾಣವು ಸಮೃದ್ಧ ದೇಶದ ಪ್ರಮುಖ ಅಂಶ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನಮ್ಮ ರೈತರು ಸಶಕ್ತರಾದಾಗ ನವ ಭಾರತವು ಹೆಚ್ಚು ಸಮೃದ್ಧವಾಗಿರುತ್ತದೆ. ರೈತರು ಬಲಿಷ್ಠರಾದಾಗ ರಾಷ್ಟ್ರ ಅಭಿವೃದ್ಧಿಯಾಗುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ,
ಅರ್ಹ ರೈತರ ಕುಟುಂಬಕ್ಕೆPM-KISAN ಯೋಜನೆಯಡಿಯಲ್ಲಿ ವರ್ಷಕ್ಕೆ ಆರು ಸಾವಿರ ರೂಪಾಯಿಗಳ ಆರ್ಥಿಕ ಪ್ರಯೋಜನವನ್ನು ಒದಗಿಸಲಾಗುತ್ತದೆ. ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದ್ದು, ಮೂರು ಕಂತುಗಳಲ್ಲಿ ಎರಡು ಸಾವಿರ ರೂ. ನೀಡಲಾಗುವುದು. ಇದುವರೆಗೆ 11 ಕೋಟಿ 30 ಲಕ್ಷಕ್ಕೂ ಹೆಚ್ಚು ರೈತರ ಕುಟುಂಬಕ್ಕೆ ಪ್ರಯೋಜನ ಸಿಕ್ಕಿದೆ ಎಂದಿದ್ದಾರೆ.

 

ಕೃಷಿ ಮೂಲಸೌಕರ್ಯ ನಿಧಿಯಡಿ 1 ಲಕ್ಷ ಕೋಟಿ ಸಾಲದ ಸೌಲಭ್ಯ ಒದಗಿಸಲಾಗುತ್ತದೆ. ಇದರಡಿ 11,632 ಯೋಜನೆಗಳಿಗೆ 8,585 ಕೋಟಿ ರೂ. ಸಾಲ ನೀಡಲಾಗಿದೆ. ಒಂದು ಕೋಟಿ 73 ಲಕ್ಷಕ್ಕೂ ಹೆಚ್ಚು ರೈತರು ಇ-ನ್ಯಾಮ್ ವೇದಿಕೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ (e-NAM) ಭಾರತದಲ್ಲಿ ಕೃಷಿ ಸರಕುಗಳಿಗೆ ಆನ್‌ಲೈನ್ ವ್ಯಾಪಾರ ವೇದಿಕೆಯಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss