ಈ ದಿನ ಮಲ್ಟಿಪ್ಲೆಕ್ಸ್‌ನಲ್ಲಿ ಕೇವಲ 99 ರೂ.ಗೆ ಸಿನಿಮಾ ನೋಡುವ ಅವಕಾಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದಾದ್ಯಂತ ಅಕ್ಟೋಬರ್ 13 ರಂದು ರಾಷ್ಟ್ರೀಯ ಸಿನೆಮಾ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂದು ಕೇವಲ 99ರೂ ಪಾವತಿಸಿ ಸಿನಿಮಾ ನೋಡುವ ಅವಕಾಶ ನಿಮಗೆ ಸಿಗಲಿದೆ.

ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಎಐ) ಮತ್ತು ಭಾರತದಾದ್ಯಂತ ಸಿನೆಮಾಸ್ 99 ರೂ.ಗಳಿಗೆ ಟಿಕೆಟ್ ಮಾರಾಟ ಮಾಡುವುದಾಗಿ ಘೋಷಿಸಿದ್ದು, ಈ ಮೂಲಕ ರಾಷ್ಟ್ರೀಯ ಸಿನೆಮಾ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ.

ಆಸಕ್ತ ವೀಕ್ಷಕರು ಬುಕ್ ಮೈಶೋ, ಪೇಟಿಎಂ ಅಥವಾ ಮಲ್ಟಿಪ್ಲೆಕ್ಸ್ ಗಳ ಆಯಾ ವೆಬ್ ಸೈಟ್ ಗಳಲ್ಲಿ ಟಿಕೆಟ್ ಬುಕ್‌ ಮಾಡಿಕೊಳ್ಳಬಹುದು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!