Sunday, December 10, 2023

Latest Posts

ನನ್ನ ಶತಕ ಗಾಜಾದ ಅಣ್ಣ ತಂಗಿಯರಿಗೆ ಅರ್ಪಣೆ: ಪಾಕ್‌ ಕ್ರಿಕೆಟಿಗ ಮೊಹಮ್ಮದ್​ ರಿಜ್ವಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ವಿರುದ್ಧ ಪಾಕ್ ಮಂಗಳವಾರ ಗೆಲುವಿನ ನಗೆ ಬೀರಿದ್ದು, ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಬಾರಿಸಿದ ಅಜೇಯ ಶತಕ ಹಾಗೂ ಅಬ್ದುಲ್ ಶಫೀಕ್ ಬಾರಿಸಿದ ಸಮಯೋಚಿತ ಶತಕದ ನೆರವಿನಿಂದ ಯಶಸ್ವಿಯಾಗಿದೆ.

ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ರಿಜ್ವಾನ್ (131) ಅಜೇಯ ಶತಕ ಸಿಡಿಸಿದರೆ, ಯುವ ಕ್ರಿಕೆಟಿಗ ಅಬ್ದುಲ್ಲಾ ಶಫೀಕ್ (113) ತಮ್ಮ ಚೊಚ್ಚಲ ಏಕದಿನ ಶತಕ ದಾಖಲಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದು ಕೊಟ್ಟರು.

ಮೊಹಮ್ಮದ್ ರಿಜ್ವಾನ್‌ 83 ರನ್ ಗಳಿಸಿದ್ದಾಗ ಕಾಲಿನಲ್ಲಿ ಸೆಳೆತ ಕಾಣಿಸಿಕೊಂಡಿತು. ಹೀಗಿದ್ದೂ ಛಲಬಿಡದೇ ಬ್ಯಾಟಿಂಗ್ ನಡೆಸುವ ಮೂಲಕ ತಂಡ ವಿಶ್ವಕಪ್ ಇತಿಹಾಸದಲ್ಲಿ ದಾಖಲೆಯ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾಯಿತು. ರಿಜ್ವಾನ್ತಂ ಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇನ್ನು ಪಂದ್ಯ ಮುಕ್ತಾಯದ ಬಳಿಕ ಟ್ವೀಟ್ ಮಾಡಿರುವ ರಿಜ್ವಾನ್, ‘ಇದು ಗಾಜಾದಲ್ಲಿರುವ ನನ್ನ ಅಣ್ಣ ತಂಗಿಯರಿಗೆ ಅರ್ಪಣೆ. ತಂಡದ ಗೆಲುವಿಗೆ ಕೊಡುಗೆ ನೀಡಿದ್ದು ಖುಷಿ ಕೊಟ್ಟಿತು. ಸಂಘಟಿತ ಪ್ರದರ್ಶನದಿಂದಾಗಿ ಈ ಗೆಲುವು ಸಾಧ್ಯವಾಯಿತು. ಅದರಲ್ಲೂ ಅಬ್ದುಲ್ಲಾ ಶಫೀಕ್ ಹಾಗೂ ಹಸನ್ ಅಲಿ ನಮ್ಮ ಗೆಲುವನ್ನು ಸುಲಭಗೊಳಿಸಿದರು.ನಾವು ಹೈದರಾಬಾದ್‌ನಲ್ಲಿರುವ ಜನರು ನೀಡಿದ ಬೆಂಬಲ ಹಾಗೂ ಆತಿಥ್ಯಕ್ಕೆ ಕೃತಜ್ಞರಾಗಿರುತ್ತೇವೆ ಎಂದು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಹಮಾಸ್‌ ಉಗ್ರರು ಮತ್ತು ಇಸ್ರೇಲಿ ಸೇನೆ ನಡುವಿನ ಸಂಘರ್ಷ ಸತತ 4ನೇ ದಿನವಾದ ಮಂಗಳವಾರ ಮತ್ತಷ್ಟು ತೀವ್ರಗೊಂಡಿದ್ದು, ಗಾಜಾ ಪ್ರದೇಶದ ಹಲವು ಆಯಕಟ್ಟಿನ ಪ್ರದೇಶಗಳ ಮೇಲೆ ಇಸ್ರೇಲ್ ದೇಶದ ಸೇನಾ ಪಡೆ ಭಾರೀ ಪ್ರಮಾಣ ದಾಳಿ ನಡೆಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!