Tuesday, March 28, 2023

Latest Posts

ರಾಷ್ಟ್ರಮಟ್ಟದಲ್ಲಿ ಮಿಂಚಿದ ಕೊಡಗಿನ ಧನ್ವಿ, ಅಬಾಕಸ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ

ಹೊಸದಿಗಂತ ವರದಿ ಮಡಿಕೇರಿ: 

ಮಹಾರಾಷ್ಟ್ರದ‌ ಮುಂಬಯಿಯಲ್ಲಿ ಫೆ.10ರಂದು ನಡೆದ ರಾಷ್ಟ್ರಮಟ್ಟದ ಅಬಕಸ್ ಮತ್ತು ಮೆಂಟಲ್ ಮ್ಯಾಥ್’ಮೆಟಿಕ್ಸ್ ಸ್ಪರ್ಧೆಯಲ್ಲಿ ಮರಗೋಡುವಿನ ಕಾನಡ್ಕ ಹೆಚ್.ಧನ್ವಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಎಡುಸ್ಮಾರ್ಟ್ ಇಂಕ್ ಸಂಸ್ಥೆ ವತಿಯಿಂದ ನಡೆದ ರಾಷ್ಟ್ರ ಮಟ್ಟದ ಅಬಕಸ್ ಮತ್ತು ಮೆಂಟಲ್‌ ಮ್ಯಾಥ್’ಮೆಟಿಕ್ಸ್ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಧನ್ವಿ ದ್ವಿತೀಯ ಸ್ಥಾನ ಪಡೆದಿದ್ದು, ಈಕೆ ಮಡಿಕೇರಿಯ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಹಾಗೂ ಮರಗೋಡುವಿನ ಕಾನಡ್ಕ ಹನೀಶ್ ಮತ್ತು ಆಶಾ ದಂಪತಿಯ ಪುತ್ರಿ.

ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಧನ್ವಿ ಈ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಇವರು ಬೆಂಗಳೂರಿನ ಇನ್ನೋವೇಷನ್ ಇನ್ಸ್ಟಿಟ್ಯೂಟ್ ನಿಂದ ತರಬೇತಿ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!