Friday, March 31, 2023

Latest Posts

ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ಫೋಟ: 2 ಸಾವು, ಹಲವರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಗುರುವಾರ ಬೆಳಗ್ಗೆ ಪಂಜಾಬ್‌ನ ಚಿಚಾವಟ್ನಿಯಲ್ಲಿ ಕ್ವೆಟ್ಟಾಗೆ ಹೋಗುವ ಜಾಫರ್ ಎಕ್ಸ್‌ಪ್ರೆಸ್‌ನಲ್ಲಿ ಸ್ಫೋಟ ಸಂಭವಿಸಿದ ಪರಿಣಾಮವಾಗಿ ಕನಿಷ್ಠ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ಕ್ವೆಟ್ಟಾಗೆ ಹೋಗುವ ಜಾಫರ್ ಎಕ್ಸ್‌ಪ್ರೆಸ್ ಚಿಚಾವಟ್ನಿ ರೈಲು ನಿಲ್ದಾಣದಿಂದ ಹಾದು ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ರೈಲು ಪೇಶಾವರದಿಂದ ಬರುತ್ತಿತ್ತು ಎಂದು ತಿಳಿದುಬಂದಿದೆ.

ಪಾಕಿಸ್ತಾನ ರೈಲ್ವೇಸ್ ವಕ್ತಾರ ಬಾಬರ್ ಅಲಿ, ಘಟನೆಯ ಸಾವು ನೋವುಗಳನ್ನು ಖಚಿತಪಡಿಸಿದ್ದಾರೆ. ಕ್ವೆಟ್ಟಾದಿಂದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ರೈಲಿನ ನಾಲ್ಕನೇ ಸಂಖ್ಯೆಯ ಬೋಗಿಯೊಳಗೆ ಸಿಲಿಂಡರ್ ಸ್ಫೋಟಗೊಂಡ ನಂತರ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಎಸ್‌ಪಿ ರೈಲ್ವೇಸ್ ಸ್ಫೋಟದ ಸ್ಥಳಕ್ಕೆ ಆಗಮಿಸಿದ್ದು, ಶೀಘ್ರದಲ್ಲೇ ಘಟನೆಯ ಬಗ್ಗೆ ವಿವರಗಳನ್ನು ನೀಡಲಿದ್ದೇವೆ ಎಂದು ಅಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!