ಶವಗಳನ್ನು ಹೂಳಲು ಶವಪೆಟ್ಟಿಗೆ ಬಳಕೆಗೆ ವಿದಾಯ ಹೇಳಿದ ಕೇರಳ ಚರ್ಚ್

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಕೇರಳದ ಆಲಪ್ಪುಳದ ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ಮೃತಪಟ್ಟವರ ಶವಗಳನ್ನು ಹೂಳಲು ಮರದ ಶವಪೆಟ್ಟಿಗೆಯ ಬಳಕೆಗೆ ವಿದಾಯ ಹೇಳಲು ನಿರ್ಧರಿಸಿದೆ.
ಹೊಸ ಪದ್ಧತಿಯಂತೆ, ದೇಹವನ್ನು ಹತ್ತಿಯಿಂದ ಮಾಡಿದ ಸಮಾಧಿ ಬಟ್ಟೆಯಲ್ಲಿ ಸುತ್ತಿ ಸಮಾಧಿಯಲ್ಲಿ ಇಡಲಾಗುತ್ತದೆ. ಈ ತಿಂಗಳ ಆರಂಭದಿಂದಲೇ ಹೊಸ ಪದ್ಧತಿಯನ್ನು ಅನುಸರಿಸಲಾಗುತ್ತಿದೆ.
ಕೇರಳದ ಕರಾವಳಿ ಪ್ರದೇಶದಲ್ಲಿರುವ ಚರ್ಚ್, ಶವಪೆಟ್ಟಿಗೆಯಲ್ಲಿ ಇರಿಸಲಾದ ದೇಹಗಳು ವರ್ಷಗಳಾದರೂ ಕೊಳೆಯುತ್ತಿಲ್ಲ ಎಂಬ ಸಂಗತಿಯನ್ನು ಗಮನಿಸಿದ ನಂತರ ಸಮಾಧಿ ಪದ್ಧತಿಗಳನ್ನು ಬದಲಾಯಿಸಿದೆ. ಚರ್ಚ್ ಸ್ಮಶಾನವು ಸಮುದ್ರದಿಂದ 400 ಮೀಟರ್ ದೂರದಲ್ಲಿದೆ. ಹಾಗಾಗಿ, ಮಣ್ಣಿನ ಲವಣಾಂಶವು ತುಂಬಾ ಹೆಚ್ಚಾಗಿದೆ. ಅದರಲ್ಲಿರುವ ಪೆಟ್ಟಿಗೆಗಳು ಮತ್ತು ದೇಹಗಳೆರಡೂ ಸಮಾಧಿ ಹೊಂಡಗಳನ್ನು ಮರುಬಳಕೆ ಮಾಡಲು ಸಾಕಷ್ಟು ವೇಗವಾಗಿ ಕೊಳೆಯುತ್ತಿಲ್ಲ. ಸಮಾಧಿ ಮಾಡಿದ ಐದು ವರ್ಷಗಳ ನಂತರವೂ ಮರದ ಶವಪೆಟ್ಟಿಗೆಯಲ್ಲಿ ಕೆಲವು ದೇಹಗಳು ಹಾಗೇಯೇ ಇರುವುದು ಕಂಡುಬಂದಿದೆ. ಶವಪೆಟ್ಟಿಗೆಯಿಲ್ಲದ ಹೆಣದ ಸಮಾಧಿಗಳು ದೇಹಗಳನ್ನು ಹೆಚ್ಚು ವೇಗವಾಗಿ ಕೊಳೆಯಲು ಸಹಾಯ ಮಾಡುತ್ತದೆ. ಈ ಕಾರಣದಿಂದ ಹೊಸ ಪದ್ಧತಿಯನ್ನು ಅನಸರಿಸಲಾಗುತ್ತಿದೆ. ಚರ್ಚ್‌ ಅನ್ನು ಅನುಸರಿಸುವ ಕುಟುಂಬಗಳ ಜೊತೆಗೆ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ.
ದೇಹಗಳನ್ನು ವಿಲೇವಾರಿ ಮಾಡುವಾಗ ಪ್ಲಾಸ್ಟಿಕ್ ಸೇರಿದಂತೆ ಎಲ್ಲಾ ರೀತಿಯ ಜೈವಿಕ ವಿಘಟನೀಯವಲ್ಲದ ವಸ್ತುಗಳನ್ನು ತ್ಯಜಿಸಲಾಗಿದೆ ಎಂದು ಚರ್ಚ್‌ ನ ಧರ್ಮಗುರು ಫಾ. ಜಾನ್ಸನ್ ತಾವುಂಡಾಯಿಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!