ಬಾಲಕನಿಗೆ ನಾಯಿ ಕಚ್ಚಿದರೂ ಸುಮ್ಮನಿದ್ದ ಯಜಮಾನಿ: ಫೈನ್‌ ಬಿದ್ದಿದ್ದೆಷ್ಟು ಗೊತ್ತಾ? ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಿಳೆಯ ಮುದ್ದಿನ ನಾಯಿ ತನ್ನ ಪಕ್ಕದಲ್ಲಿ ನಿಂತಿದ್ದ ಬಾಲಕನಿಗೆ ಕಚ್ಚಿದೆ. ಮಗು ನೋವಿನಿಂದ ಕಿರುಚುತ್ತಿದ್ದರೂ ಮಹಿಳೆ ಕ್ಯಾರೇ ಎನ್ನದೆ ನಿಂತಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆ ಬಳಿಕ ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕ ಮತ್ತು ಓರ್ವ ಮಹಿಳೆ ತನ್ನ ನಾಯಿಯೊಂದಿಗೆ ಲಿಫ್ಟ್‌ ಹತ್ತಿದ್ದಾರೆ. ಆಗ ಬಾಲಕನಿಗೆ ನಾಯಿ ಕಚ್ಚಿದೆ. ನೋವಿನಿಂದ ಬಾಲಕ ಒದ್ದಾಡುತ್ತಿದ್ದರೂ ಆ ಹೆಂಗಸು ತಲೆಕೆಡಿಸಿಕೊಳ್ಳದವಳಂತೆ ನಿಂತಿದ್ದರು. ಘಟನೆಗೆ ಪೊಲೀಸರ ಜತೆಗೆ ಪಾಲಿಕೆ ಅಧಿಕಾರಿಗಳು ಕೂಡ ಸ್ಪಂದಿಸಿದ್ದಾರೆ.

ಅಧಿಕಾರಿಗಳು ಮಹಿಳೆಯ ಮನೆಗೆ ತೆರಳಿ ನಾಯಿ ನೋಂದಣಿಯಾಗದ ಕಾರಣ ರೂ.5 ಸಾವಿರ ದಂಡ ವಿಧಿಸಿದರು. ಘಟನೆಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಮಹಿಳೆಯ ಮೇಲೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!