ಹೊಸ ದಿಗಂತ ಡಿಜಿಟಲ್ ಡೆಸ್ಕ್:
2024ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಘೋಷಣೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಡೀ ದೇಶವೇ ಹೆಮ್ಮೆ ಪಡುವಂತೆ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ಕೇಂದ್ರ ಕ್ರೀಡಾ ಹಾಗೂ ಯುವಜನ ಖಾತೆ ಇಲಾಖೆ ಘೋಷಿಸಿದೆ.
ಕ್ರೀಡಾಕ್ಷೇತ್ರದಲ್ಲಿ ಅಸಾಧಾರಣ ಪ್ರದರ್ಶನ ತೋರಿದ ದೇಶದ 17 ಪ್ಯಾರಾ ಅಥ್ಲೀಟ್‌ಗಳು ಸೇರಿದಂತೆ ಒಟ್ಟು 32 ಅಥ್ಲೀಟ್‌ಗಳಿಗೆ ಕೇಂದ್ರ ಸರ್ಕಾರವು ಅರ್ಜುನ ಪ್ರಶಸ್ತಿಯನ್ನು ಘೋಷಿಸಿದೆ. ಈ ಎಲ್ಲಾ ಅಥ್ಲೀಟ್‌ಗಳು 2025ರ ಜನವರಿ 17ರಂದು ರಾಷ್ಟ್ರಪತಿ ಭವನದಲ್ಲಿ ದೇಶದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಗೆ ಈ ಪ್ರಶಸ್ತಿಗಳನ್ನು ಸ್ವೀಕರಿಸಲಿದ್ದಾರೆ.
ಕ್ರೀಡೆ ಮತ್ತು ಕ್ರೀಡಾಕೂಟದಲ್ಲಿ ಅತ್ಯುತ್ತಮ ತರಬೇತುದಾರರಿಗಾಗಿ ದ್ರೋಣಾಚಾರ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಹಾಗೆಯೆ 2024 ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಬೇಟೆಯಾಡಿದ ಶೂಟರ್ ಮನು ಭಾಕರ್, ವಿಶ್ವ ಚೆಸ್ ಚಾಂಪಿಯನ್ 18 ವರ್ಷದ ಡಿ ಗುಕೇಶ್, ಭಾರತ ಪುರುಷರ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಹಾಗೂ ಪ್ಯಾರಾಲಿಂಪಿಕ್ಸ್ ಪಟು ಪ್ರವೀಣ್ ಕುಮಾರ್ ಅವರಿಗೆ ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿ ಅರಸಿ ಬಂದಿದೆ.
ಅರ್ಜುನ ಪ್ರಶಸ್ತಿ
ಜ್ಯೋತಿ ಯರ್ರಾಜಿ – ಅಥ್ಲೆಟಿಕ್ಸ್
ಅಣ್ಣು ರಾಣಿ – ಅಥ್ಲೆಟಿಕ್ಸ್
ನೀತು – ಬಾಕ್ಸಿಂಗ್
ಸವೀಟಿ – ಬಾಕ್ಸಿಂಗ್
ವಂಟಿಕಾ ಅಗರ್ವಾಲ್ – ಚೆಸ್
ಸಲೀಮಾ ಟೆಟೆ – ಹಾಕಿ
ಅಭಿಷೇಕ್ – ಹಾಕಿ
ಸಂಜಯ್ – ಹಾಕಿ
ಜರ್ಮನ್ಪ್ರೀತ್ ಸಿಂಗ್ – ಹಾಕಿ
ಸುಖ್ಜೀತ್ ಸಿಂಗ್ – ಹಾಕಿ
ರಾಕೇಶ್ ಕುಮಾರ್ – ಪ್ಯಾರಾ ಆರ್ಚರಿ
ಪ್ರೀತಿ ಪಾಲ್ – ಪ್ಯಾರಾ ಅಥ್ಲೆಟಿಕ್ಸ್
ಜೀವನ್ಜಿ ದೀಪ್ತಿ – ಪ್ಯಾರಾ ಅಥ್ಲೆಟಿಕ್ಸ್
ಅಜಿತ್ ಸಿಂಗ್ – ಪ್ಯಾರಾ ಅಥ್ಲೆಟಿಕ್ಸ್
ಸಚಿನ್ ಸರ್ಜೆರಾವ್ ಖಿಲಾರಿ – ಪ್ಯಾರಾ-ಅಥ್ಲೆಟಿಕ್ಸ್
ಧರಮ್ಬೀರ್ – ಪ್ಯಾರಾ ಅಥ್ಲೆಟಿಕ್ಸ್
ಪ್ರಣವ್ ಸೂರ್ಮಾ – ಪ್ಯಾರಾ ಅಥ್ಲೆಟಿಕ್ಸ್
ಎಚ್ ಹೊಕಾಟೊ ಸೆಮಾ – ಪ್ಯಾರಾ-ಅಥ್ಲೆಟಿಕ್ಸ್
ಸಿಮ್ರಾನ್ – ಪ್ಯಾರಾ ಅಥ್ಲೆಟಿಕ್ಸ್
ನವದೀಪ್ – ಪ್ಯಾರಾ ಅಥ್ಲೆಟಿಕ್ಸ್
ನಿತೇಶ್ ಕುಮಾರ್ – ಪ್ಯಾರಾ ಬ್ಯಾಡ್ಮಿಂಟನ್
ತುಳಸಿಮತಿ ಮುರುಗೇಶನ್ – ಪ್ಯಾರಾ ಬ್ಯಾಡ್ಮಿಂಟನ್
ನಿತ್ಯಾ ಶ್ರೀ ಸುಮತಿ ಶಿವನ್ – ಪ್ಯಾರಾ ಬ್ಯಾಡ್ಮಿಂಟನ್
ಮನೀಷಾ ರಾಮದಾಸ್ – ಪ್ಯಾರಾ ಬ್ಯಾಡ್ಮಿಂಟನ್
ಕಪಿಲ್ ಪರ್ಮಾರ್ – ಪ್ಯಾರಾ-ಜೂಡೋ
ಮೋನಾ ಅಗರ್ವಾಲ್ – ಪ್ಯಾರಾ ಶೂಟಿಂಗ್
ರುಬಿನಾ ಫ್ರಾನ್ಸಿಸ್ – ಪ್ಯಾರಾ ಶೂಟಿಂಗ್
ಸ್ವಪ್ನಿಲ್ ಸುರೇಶ್ ಕುಸಾಲೆ – ಶೂಟಿಂಗ್
ಸರಬ್ಜೋತ್ ಸಿಂಗ್ – ಶೂಟಿಂಗ್
ಅಭಯ್ ಸಿಂಗ್ – ಸ್ಕ್ವಾಷ್
ಸಾಜನ್ ಪ್ರಕಾಶ್ – ಈಜು
ಅಮನ್ – ಕುಸ್ತಿ
ಇಬ್ಬರು ಅಥ್ಲೀಟ್ ಗಳನ್ನು ಜೀವಮಾನದ ಅರ್ಜುನ ಪ್ರಶಸ್ತಿಗೆ ಆಯ್ಕೆ
ಸುಚಾ ಸಿಂಗ್ – ಅಥ್ಲೆಟಿಕ್ಸ್
ಮುರಳಿಕಾಂತ್ ರಾಜಾರಾಮ್ ಪೆಟ್ಕರ್ – ಪ್ಯಾರಾ ಈಜು
ಅತ್ಯುತ್ತಮ ತರಬೇತುದಾರರಿಗಾಗಿ ದ್ರೋಣಾಚಾರ್ಯ ಪ್ರಶಸ್ತಿ
ಸುಭಾಷ್ ರಾಣಾ – ಪ್ಯಾರಾ-ಶೂಟಿಂಗ್ (ನಿಯಮಿತ)
ದೀಪಾಲಿ ದೇಶಪಾಂಡೆ – ಶೂಟಿಂಗ್ (ರೆಗ್ಯುಲರ್)
ಸಂದೀಪ್ ಸಾಂಗ್ವಾನ್ – ಹಾಕಿ (ನಿಯಮಿತ)
ಎಸ್ ಮುರಳೀಧರನ್ – ಬ್ಯಾಡ್ಮಿಂಟನ್ (ಜೀವಮಾನದ ಸಾಧನೆ)
ಅರ್ಮಾಂಡೊ ಅಗ್ನೆಲೊ ಕೊಲಾಕೊ – ಫುಟ್ಬಾಲ್ (ಜೀವಮಾನದ ಸಾಧನೆ)
ಖೇಲ್ ರತ್ನ ಪ್ರಶಸ್ತಿ
ಮನು ಭಾಕರ್: ಏರ್ ಪಿಸ್ತೂಲ್
ಹರ್ಮನ್‌ಪ್ರೀತ್ ಸಿಂಗ್:ಹಾಕಿ
ಡಿ ಗುಕೇಶ್: ಚೆಸ್
ಪ್ರವೀಣ್ ಕುಮಾರ್: ಪ್ಯಾರಾ ಅಥ್ಲೀಟ್