CINE | ಯಶ್ 19 ಸಿನಿಮಾಕ್ಕೆ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ನಾಯಕಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಶ್ ನಟನೆಯ ಯಶ್ 19 ಸಿನಿಮಾ ಟೈಟಲ್ ರಿವೀಕ್ ಬಗ್ಗೆ ಇತ್ತೀಚೆಗಷ್ಟೇ ತಂಡ ಮಾಹಿತಿ ನೀಡಿತ್ತು.

ಇದೀಗ ಯಶ್ 19 ಸಿನಿಮಾಕ್ಕೆ ನಟಿ ಸಾಯಿ ಪಲ್ಲವಿ ಹೀರೋಯಿನ್ ಎಂದು ಹೇಳಲಾಗುತ್ತಿದೆ. ಡಿ.8ರಂದು ಯಶ್ 19 ಸಿನಿಮಾದ ಟೈಟಲ್ ರಿವೀಲ್ ಮಾಡಲಾಗುತ್ತದೆ. ಅದೇ ಸಮಯದಲ್ಲಿ ಸಿನಿಮಾ ಹೀರೋಯಿನ್ ಯಾರು ಎಂಬ ವಿಷಯವೂ ಹೊರಬರಲಿದೆ ಎನ್ನಲಾಗಿದೆ.

ಕೆಜಿಎಫ್ 2 ನಂತರ ಯಶ್ ಸಿನಿಮಾಗಳ ಬಗ್ಗೆ ಯಾವ ಅಪ್ಡೇಟ್ ಕೂಡ ಹೊರಬಿದ್ದಿಲ್ಲ. ಯಶ್ ಜನ್ಮದಿನಕ್ಕೆ ಸಿನಿಮಾ ಹೆಸರನ್ನು ಘೋಷಣೆ ಮಾಡ್ತಾರೆ ಎಂದು ಹೇಳಲಾಗಿತ್ತು. ಆದರೆ ಒಂದೆರಡು ದಿನದ ನಂತರ ಸಿನಿಮಾ ಟೈಟಲ್ ರಿವೀಲ್ ಡೇಟ್‌ನ್ನು ತಂಡ ಅನೌನ್ಸ್ ಮಾಡಿದೆ.

ಮಲಯಾಳಂನ ಪ್ರೇಮಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಪಲ್ಲವಿಗೆ ಕನ್ನಡದಲ್ಲಿ ಇದೇ ಮೊದಲನೇ ಸಿನಿಮಾ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!