ರಷ್ಯಾ ದಾಳಿಗೆ ಕರ್ನಾಟಕದ ನವೀನ್ ಸಾವು: ಪೋಷಕರಿಗೆ ಕರೆ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್​​ನಲ್ಲಿ ರಷ್ಯಾ ಮಿಲಿಟರಿ ಪಡೆಯ ದಾಳಿಗೆ ಮೃತರಾದ ಕರ್ನಾಟಕದ ಮೆಡಿಕಲ್‌ ವಿದ್ಯಾರ್ಥಿ ನವೀನ್ ಕುಟುಂಬಕ್ಕೆ ಪ್ರಧಾನಿ ಮೋದಿ ಸಾಂತ್ವನ ಹೇಳಿದ್ದಾರೆ.
ಉಕ್ರೇನ್ ನ ಖಾರ್ಕೀವ್ ನಲ್ಲಿನ ಸೂಪರ್ ಮಾರ್ಕೆಟ್ ಬಳಿಯಲ್ಲಿ ಬೆಳಿಗ್ಗೆ ತಿಂಡಿ ತರೋದಕ್ಕೆ ತೆರಳಿದ್ದಂತ ಕರ್ನಾಟಕದ ಹಾವೇರಿಯ ನವೀನ್, ರಷ್ಯಾ ಸೇನೆಯಿಂದ ನಡೆಸಿದ ಶೆಲ್ ದಾಳಿಯಿಂದಾಗಿ ಸಾವನ್ನಪ್ಪಿದ್ದರು.
ನವೀನ್​ ಸಾವನ್ನಪ್ಪಿರುವ ವಿಷಯವನ್ನು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸುತ್ತಿದ್ದಂತೆ ಪ್ರಧಾನಿ ಮೋದಿ ದೂರವಾಣಿ ಮೂಲಕ ನವೀನ್ ತಂದೆಗೆ ಕರೆ ಮಾಡಿ ಕೆಲ ನಿಮಿಷಗಳ ಕಾಲ ಮಾತನಾಡಿದ್ದು, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.
ದೇಶವೇ ನಿಮ್ಮೊಂದಿಗಿದೆ, ಮಗನ ಸಾವನ್ನು ಅರಗಿಸಿಕೊಳ್ಳುವಂತ ಶಕ್ತಿಯನ್ನು ಆ ದೇವರು ನೀಡಲಿ. ಭಗವಂತ ನಿಮ್ಮ ಕುಟುಂಬಕ್ಕೆ ಮಗನ ಸಾವಿನ ದುಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಸಾಂತ್ವಾನ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!