ಉಕ್ರೇನ್‌ ನಲ್ಲಿ ರಾಜ್ಯದ ನವೀನ್ ಸಾವು: ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ನಲ್ಲಿ ರಷ್ಯಾದ ಶೆಲ್ ದಾಳಿಯಲ್ಲಿ ರಾಜ್ಯದ ಹಾವೇರಿಯ ನವೀನ್ ಸಾವನ್ನಪ್ಪಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಭಾವುಕರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ನವೀನ್ ಅವರ ಕುಟುಂಬ ನನಗೆ ಗೊತ್ತು. ಅವರು ನನಗೆ ತುಂಬಾ ಹತ್ತಿರವಾಗಿದ್ದಾರೆ ಎಂದಾಗ ಸಿಎಂ ಗದ್ಗದಿತರಾಗಿದ್ದು, ಮಾತನಾಡಲಾಗದೇ ಭಾವುಕರಾಗಿ ಬಳಿಕ ಮಾತು ಮುಂದುವರೆಸಿದರು.
ಮೃತದೇಹವನ್ನು ಭಾರತಕ್ಕೆ ತರಲು ನಾವು ಪ್ರಯತ್ನಿಸಿದ್ದು, ನೆರವಿಗಾಗಿ ಪಿಎಂಒ ಮತ್ತು ಎಂಇಎಗೆ ಮನವಿ ಮಾಡಿದ್ದೇನೆ. ಪ್ರಧಾನಿ ಮೋದಿ ಅವರು ಕೂಡ ನವೀನ್ ಕುಟುಂಬದವರೊಂದಿಗೆ ಮಾತನಾಡಿದ್ದಾರೆ ಎಂದರು.
ಇಬ್ಬರು ವ್ಯಕ್ತಿಗಳು ನವೀನ್ ನೊಂದಿಗೆ ಇದ್ದರು. ಅವರಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಅವರೂ ಹಾವೇರಿ ಜಿಲ್ಲೆಯ ಚಳಗೇರಿ ಮತ್ತು ರಾಣೆಬೆನ್ನೂರು ತಾಲೂಕಿನವರು ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!