ಪಂಜಾಬ್‌ ಎಲೆಕ್ಷನ್‌ ಫೈಟ್:‌ ನಾಮಪತ್ರ ಸಲ್ಲಿಸಿದ ನವಜೋತ್‌ ಸಿಂಗ್‌ ಸಿಧು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂದಿನ ತಿಂಗಳು ನಡೆಯಲಿರುವ ಪಂಜಾಬ್‌ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ನಾಮಪತ್ರ ಸಲ್ಲಿಸಿದ್ದಾರೆ.
ಅಮೃತಸರದ ಪೂರ್ವ ಕ್ಷೇತ್ರದಿಂದ ನವಜೋತ್‌ ಸಿಂಗ್‌ ಸಿಧು ಸ್ಪರ್ಧಿಸಲಿದ್ದಾರೆ. ಇಂದು ನವಜೋತ್‌ ಸಿಂಗ್‌ ಸಿಧು ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿ ಚುನಾವಣಾ ಕಣಕ್ಕಿಳಿದಿದ್ದಾರೆ.
ನವಜೋತ್‌ ಸಿಂಗ್‌ ಸಿಧು ಎದುರು ಶಿರೋಮಣಿ ಅಕಾಳಿದಳ ಮಾಜಿ ಸಚಿವ ಬಿಕ್ರಮ್‌ ಸಿಂಗ್‌ ಮಜಿಥಿಯಾ ಅವರನ್ನು ನಿಲ್ಲಿಸಿದ್ದಾರೆ. ಫೆ.20ರಂದು ಪಂಜಾಬ್‌ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಮಾ.10ರಂದು ಮತ ಎಣಿಕೆ ನಡೆಯಲಿದೆ.
ನಿನ್ನೆಯಷ್ಟೆ ಸಿಧು ಸೋದರಿ ಸುಮನ್‌ ಅವರು, ಸಿಧು ಕುರಿತು ನೀಡಿದ ಹೇಳಿಕೆಗಳು ಪಂಜಾಬ್‌ ಜನರಿಗೆ ಪ್ರಶ್ನಾರ್ಹವಾಗಿ ಉಳಿದುಕೊಂಡಿರುವ ನಡುವೆ ಕಾಂಗ್ರೆಸ್‌ ನ ಈ ಬೆಳವಣಿಗೆ ಚುನಾವಣೆ ವೇಳೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!