ಕಡಿಮೆ ಕ್ಯಾಲೊರಿ ಇರುವ ಹರಿವೆ ಸೊಪ್ಪು ಸೇವಿಸಿದ್ದೀರಾ? ಇದರಲ್ಲಿದೆ ಸಾಕಷ್ಟು ಪ್ರಯೋಜನ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತಮ ಆರೋಗ್ಯಕ್ಕೆ ಹಸಿರು ತರಕಾರಿ ಸೇವಿಸಬೇಕು ಅಂತ ಹೇಳೋದು ಸಹಜ. ಅದರಲ್ಲಿ ಹರಿವೆ ಸೊಪ್ಪು ಕೂಡ ಒಂದು. ಈ ಸೊಪ್ಪಿನಲ್ಲಿ ನಮ್ಮ ದೈಹಿಕ ಆರೋಗ್ಯಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳು ಇವೆ..

  • ಕ್ಯಾಲೊರಿ: ಇದರಲ್ಲಿ ತುಂಬಾ ಕಡಿಮೆ ಪ್ರಮಾಣದ ಕ್ಯಾಲೊರಿಗಳಿದ್ದು, ತೂಕ ಇಳಿಸೋಕೆ ತುಂಬಾ ಒಳ್ಳೆಯ ಆಹಾರ.
  • ಪೋಷಕಾಂಶ: ಇದರಲ್ಲಿ ಪ್ರೋಟೀನ್ ನಾರು, ಕಬ್ಬಿಣ ಸೇರಿದಣತೆ ಕೊಲೆಸ್ಟ್ರಾಲ್‌ ತಗ್ಗಿಸಲು ಬೇಕಾದ ಪೋಷಕಾಂಶ ಇದೆ.
  • ರಕ್ತ ಹೀನತೆ: ಹರಿವೆ ಸೊಪ್ಪು ಸೇವಿಸುವುದರಿಂದ ಇದರಲ್ಲಿನ ವಿಟಮಿನ್‌ ಸಿ ಅಂಶ ದೇಹದ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಹೀರಿಕೊಳ್ಳುತ್ತದೆ.
  • ಜೀರ್ಣಕ್ರಿಯೆ: ಇದರಲ್ಲಿ ನಾರಿನಾಂಶ ಹೆಚ್ಚಾಗಿದ್ದು, ಇದು ಜೀರ್ಣಕ್ರಿಯೆ ಸುಧಾರಿಸಿ, ಅತಿಸಾರ ಹಾಗೂ ರಕ್ತಸ್ರಾವವನ್ನು ನಿಯಂತ್ರಿಸುತ್ತದೆ.
  • ಕ್ಯಾಲ್ಶಿಯಂ: ಇದರಲ್ಲಿ ಹೆಚ್ಚಿನ ಕ್ಯಾಲ್ಶಿಯಂ ಇರುವ ಕಾರಣ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಹೋಗಲಾಡಿಸುತ್ತೆ.
  • ಕೂದಲು: ಇದರಲ್ಲಿರುವ ಲೈಸಿನ್‌ ಅಂಶ ಹಾಗೂ ಅಮೇನೋ ಆಮ್ಲ ಅಂಶಗಳು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಲಿದೆ.
  • ಹೃದಯ: ಇದಲ್ಲಿರನ ಪೊಟಾಷಿಯಂ ಅಂಶವು ಹೃದಯ ಸಂಬಂಧಿ ಕಾಯಿಲೆಗಳಿಗೆ ಪರಿಣಾಮಕಾರಿಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!