ಜೈಲಿನಿಂದ ಹೊರಬಂದು ರಾಹುಲ್ ಗಾಂಧಿ,ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ ಮಾಡಿದ ನವಜೋತ್ ಸಿಂಗ್ ಸಿಧು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು (Navjot Singh Sidhu) 10 ತಿಂಗಳ ಬಳಿಕ ಜೈಲಿನಿಂದ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಇಂದು (ಗುರುವಾರ) ದೆಹಲಿಯಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ (Rahul Gandhi )ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರನ್ನು ಭೇಟಿ ಮಾಡಿದ್ದಾರೆ.

ರಾಹುಲ್ ಗಾಂಧಿ ಕ್ರಾಂತಿ ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದ ಸಿಧು , ಜನರಿಗಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ನನ್ನ ಮಾರ್ಗದರ್ಶಕ ರಾಹುಲ್ ಜೀ ಮತ್ತು ಸ್ನೇಹಿತ, ತತ್ವಜ್ಞಾನಿ, ಮಾರ್ಗದರ್ಶಿ ಪ್ರಿಯಾಂಕಾ ಜಿ ಅವರನ್ನು ಇಂದು ದೆಹಲಿಯಲ್ಲಿ ಭೇಟಿ ಮಾಡಿ ಮಾಡಿದೆ. ನೀವು ನನ್ನನ್ನು ಜೈಲಿನಲ್ಲಿಡಬಹುದು, ನನ್ನನ್ನು ಬೆದರಿಸಬಹುದು, ನನ್ನ ಎಲ್ಲಾ ಹಣಕಾಸು ಖಾತೆಗಳನ್ನು ನಿರ್ಬಂಧಿಸಬಹುದು. ಆದರೆ ಪಂಜಾಬ್ ಮತ್ತು ನನ್ನ ನಾಯಕರಿಗೆ ನನ್ನ ಬದ್ಧತೆಯನ್ನು ಕಡಿಮೆ ಮಾಡಲಾಗುವುದಿಲ್ಲ. ನನ್ನ ನಾಯಕರು ಒಂದು ಇಂಚು ಕೂಡ ಕದಲುವುದಿಲ್ಲ ಅಥವಾ ಹಿಂದೆ ಸರಿಯುವುದಿಲ್ಲ ಎಂದು ಸಿಧು ಫೋಟೊ ಟ್ವೀಟ್ ಮಾಡಿದ್ದಾರೆ.

ಪಂಜಾಬ್‌ನ ಪಟಿಯಾಲದಲ್ಲಿ 34 ವರ್ಷಗಳ ಹಿಂದೆ ರಸ್ತೆ ಜಗಳದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಸಂಬಂಧಿಸಿದಂತೆ ನವಜೋತ್ ಸಿಧು 10 ತಿಂಗಳ ಕಾಲ ಜೈಲಿನಲ್ಲಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!