ಆನ್‌ಲೈನ್ ಗೇಮಿಂಗ್ ಆ್ಯಪ್‌ಗೆ ಹೊಸ ನಿಯಮ ಜಾರಿ: ಬೆಟ್ಟಿಂಗ್ ಸಂಪೂರ್ಣ ಬ್ಯಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಆನ್ಲೈನ್ ಗೇಮಿಂಗ್’ಗಾಗಿ ಕೇಂದ್ರ ಸರ್ಕಾರ ಬ್ರೇಕ್ ಹಾಕಲು ಮುಂದಾಗಿದ್ದು, ಆನ್‌ಲೈನ್ ಜೂಜು, ಆನ್‌ಲೈನ್ ಗೇಮಿಂಗ್ ಆ್ಯಪ್ ಮೂಲಕ ಬೆಟ್ಟಿಂಗ್ ಸೇರಿದಂತೆ ಹಲವು ನಿಯಮ ಮೀರಿದ ಚಟುವಟಿಕೆಗೆ ಹೊಸ ನಿಯಮ ಜಾರಿಗೊಳಿಸಿದೆ.

ಹೊಸ ನಿಯಮದ ಪ್ರಕಾರ, ಆನ್‌ಲೈನ್ ಜೂಜು, ಬೆಟ್ಟಿಂಗ್ ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ಈ ಕುರಿತು ಯಾವ ಆನ್‌ಲೈನ್ ಗೇಮಿಂಗ್ ಅನುಮತಿ ನೀಡಬೇಕು, ಯಾವುದಕ್ಕೆ ನಿರ್ಬಂಧ ವಿಧಿಸಬೇಕು ಅನ್ನೋದನ್ನು ಕಾನೂನು ಚಕೌಟ್ಟಿನಲ್ಲಿ ವ್ಯವಹಿಸುತ್ತೇವೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಸೆಲ್ಫಿ ರೆಗ್ಯೂಲೇಟಿಂಗ್ ಆರ್ಗನೈಜೇಶನ್(SRO) ಚೌಕಟ್ಟಿನೊಳಗೆ ಈ ಗೇಮಿಂಗ್ ಆ್ಯಪ್ ಕಾರ್ಯನಿರ್ವಹಣೆ ವಿವರ ನೀಡಲಾಗುತ್ತದೆ. ಈ ಕುರಿತು ಸಾಕಷ್ಟು ದೂರುಗಳು ಬಂದಿದೆ.

ಫೆಬ್ರವರಿ ತಿಂಗಳಲ್ಲಿ ಬೆಟ್ಟಿಂಗ್ ಹಾಗೂ ಸಾಲ ನೀಡುತ್ತಿದ್ದ ಆನ್‌ಲೈನ್ ಆ್ಯಪ್‌ಗಳಿಂದ ಜಾರಿ ನಿರ್ದೇಶನಾಲಯ 859.15 ಕೋಟಿ ರೂಪಾಯಿ ಅಕ್ರಮ ಹಣ ವಶಪಡಿಸಿಕೊಂಡಿತ್ತು. 1999ರ ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆಯಡಿ 289.28 ಕೋಟಿ ರು. ಮೌಲ್ಯದ ಅಕ್ರಮ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಆ್ಯಪ್‌ಗಳಿಗೆ ಕಡಿವಾಣ ಹಾಕಲು ಆರ್‌ಬಿಐನ ನಿಯಂತ್ರಿತ ಘಟಕಗಳು ಬಳಸುತ್ತಿರುವ ಡಿಜಿಟಲ್‌ ಲೆಂಡಿಂಗ್‌ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿರುವ ಪಟ್ಟಿಯಲ್ಲಿರುವ ಆ್ಯಪ್‌ಗಳನ್ನು ಮಾತ್ರ ತಮ್ಮ ಆ್ಯಪ್‌ ಸ್ಟೋರ್‌ಗಳಲ್ಲಿ ಬಳಸುವಂತೆ ಮಧ್ಯವರ್ತಿಗಳಿಗೆ ಸೂಚಿಸಲಾಗಿದೆ ಎಂದಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!