ಸೋನಿಯಾ ಅಣತಿಗೆ ಮಣಿದ ಸಿಧು: ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಂಜಾಬ್‌ ನಲ್ಲಿ ಕಾಂಗ್ರೆಸ್‌ ಹೀನಾಯಸೋಲಿನ ಬೆನ್ನಲ್ಲೇ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ನಾಯಕರ ನಡುವಿನ ಒಳಜಗಳಗಳು, ಬಿನ್ನಾಭಿಪ್ರಾಯಗಳು ಕಾಂಗ್ರೆಸ್‌ ಪಂಚರಾಜ್ಯಗಳ ಚುನಾವಣೆಯಲ್ಲಿ ನೆಲಕಚ್ಚಲು ಕಾರಣವಾಗಿದೆ. ಕಾಂಗ್ರೆಸ್‌ ನ ಎಲ್ಲಾ ಸ್ತರಗಳಲ್ಲಿಯೂ ನಾಯಕತ್ವ ಬದಲಾವಣೆಯಾಗಬೇಕು ಎಂಬ ಕೂಗು ಇತ್ತೀಚೆ ಪಕ್ಷದೊಳಗೆ ಬಲವಾಗಿ ಕೇಳಿಬರುತ್ತಿತ್ತು.
ಪಂಚರಾಜ್ಯ ಚುನಾವನೆಯ ಸೋಲಿನ ಹೊಣೆ ಹೊತ್ತು ಎಲ್ಲಾ ಐದು ರಾಜ್ಯಗಳ (ಪಂಜಾಬ್​, ಗೋವಾ, ಉತ್ತರಪ್ರದೇಶ, ಉತ್ತರಾಖಂಡ್​, ಮಣಿಪುರ) ಪ್ರದೇಶ ಕಾಂಗ್ರೆಸ್​ ಅಧ್ಯಕ್ಷರು ರಾಜೀನಾಮೆ ಸಲ್ಲಿಸುವಂತೆ ಮಾರ್ಚ್​ 15ರಂದು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ್ದರು. ಅದರಂತೆ ರಾಜೀನಾಮೆ ಸಲ್ಲಿಸಿರುವ ಸಿಧು, ಕಾಂಗ್ರೆಸ್ ಅಧ್ಯಕ್ಷರ ಅಪೇಕ್ಷೆಯಂತೆ ನಾನು ನನ್ನ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಟ್ವಿಟರ್‌ ನಲ್ಲಿ ರಾಜೀನಾಮೆ ಪತ್ರವನ್ನು ಹಂಚಿಕೊಂಡಿದ್ದಾರೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!