ಹೊಸದಿಗಂತ ಡಿಜಿಟಲ್ ಡೆಸ್ಕ್
ನ್ಯೂಜಿಲ್ಯಾಂಡ್ ನಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್ ತನ್ನ ನಾಲ್ಕನೇ ಪಂದ್ಯದಲ್ಲಿ ಬಾರತದ ವನಿತೆಯರಿಗೆ ಹೀನಾಯ ಸೋಲು ಎದುರಾಗಿದೆ. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಭಾರತದ ವನಿತೆಯರು ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 4 ವಿಕೆಟ್‌ಗಳಿಂದ ಮುಖಭಂಗ ಅನುಭವಿಸಿದ್ದಾರೆ.
ಮೊದಲು ಬ್ಯಾಟಿಂಗ್ ಗೆ ಇಳಿದ ಟೀಂ ಇಂಡಿಯಾದ ವನಿತೆಯರು ಬ್ಯಾಟಿಂಗ್ನಲ್ಲಿ ದಯನೀಯ ಪ್ರದರ್ಶನ ನೀಡಿ 36.2 ಓವರ್‌ಗಳಲ್ಲಿ ಕೇವಲ 134 ರನ್‌ಗಳಿಗೆ ಆಲೌಟಾದರು. ಆಂಗ್ಲರ ಬೌಲಿಂಗ್ ದಾಳಿಗೆ ಕೊಂಚ ಪ್ರತಿರೋಧ ತೋರಿದ ತೋರಿದ ಸ್ಮೃತಿ ಮಂದಾನ 35 ರನ್, ರಿಚಾ ಘೋಷ್ 33 ರನ್, ಜೂಲನ್ ಗೋಸ್ವಾಮಿ 20 ರನ್ ಕಲೆಹಾಕಿದರು. ಯಾಶಿಕಾ ಭಾಟಿಯಾ, ಹರ್ಮನ್ ಪ್ರೀತ್ , ದೀಪ್ತಿ ಶರ್ಮಾ, ಮಿಥಾಲಿ ರಾಜ್ ಕಳೆಪೆ ಪ್ರದರ್ಶನ ಭಾರತದ ಸೋಲಿಗೆ ಕಾರಣವಾಯ್ತು. ಇಂಗ್ಲೆಂಡ್ ಪರ ಮಾರಕ ದಾಳಿ ನಡೆಸಿದ ಆಫ್ ಸ್ಪಿನ್ನರ್ ಶಾರ್ಲೆಟ್ ಡೀನ್ 4 ವಿಕೆಟ್ ಗಳಸಿದರು.
ಸುಲಭ ಗುರಿ ಬೆನ್ನಟ್ಟಿದ ಆಂಗ್ಲರು 31.2 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 136 ರನ್ ಕಲೆಹಾಕಿ ಗೆಲುವು ತನ್ನದಾಗಿಸಿಕೊಂಡಿತು. ಇಂಗ್ಲೆಂಡ್ ಪರ ನಾಯಕಿ ಹೀದರ್ ನೈಟ್ 52 ಹಾಗೂ ಸಿವೆರ್ 45 ರನ್ ಕಲೆಹಾಕಿ ತಂಡವನ್ನು ಗೆಲುವಿನ ದಡ ಸೇರಿಸಿದರು
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ