ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಿನ ಸರ್ಕಾರ ಬಂದ್ಮೇಲೆ ಮತ್ತೆ ನಕ್ಸಲರ ಚಟುವಟಿಕೆಗಳು ಶುರುವಾಗಿದೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.
ಸರ್ಕಾರ ಮತ್ತು ಪೊಲೀಸರ ಕಾರ್ಯಚರಣೆಯನ್ನು ಸ್ವಾಗತ ಮಾಡುತ್ತೇನೆ. ಅನೇಕ ವರ್ಷಗಳಿಂದ ನಕ್ಸಲ್ ಚಟುವಟಿಕೆಗಳು ಸ್ತಬ್ದವಾಗಿತ್ತು. ಆದರೆ ಕಳೆದ ಒಂದೂವರೆ ವರ್ಷದಿಂದ ಮತ್ತೆ ನಕ್ಸಲ್ ಚಟುವಟಿಕೆಗಳು ಶುರುವಾಗಿದೆ. ನಗರ ನಕ್ಸಲ್‌ಗಳು ಸಹ ಇದ್ದಾರೆ.
ಕಾಡಿನಲ್ಲಿ ಕೂತು ಬಂದೂಕು ಹಿಡಿದು ಕಾರ್ಯಚರಣೆ ಮಾಡುವವರು ಇದ್ದಾರೆ. ನಮ್ಮ ಸರ್ಕಾರದ ಅವಧಿಯಲ್ಲಿ ನಕ್ಸಲ್ ಚಟುವಟಿಕೆಯನ್ನು ಮಟ್ಟ ಹಾಕಿದ್ದೆವು. ಇವರೆಲ್ಲ ಹೊರ ರಾಜ್ಯಗಳಲ್ಲಿ ತಲೆಮರಿಸಿಕೊಂಡಿದ್ದರು. ಈಗಿನ ಸರ್ಕಾರ ಬಂದ್ಮೇಲೆ ಮತ್ತೆ ತಮ್ಮ ಚಟುವಟಿಕೆಗಳನ್ನು ಮಾಡಲು ಬಂದಿದ್ದಾರೆ. ನಗರ ನಕ್ಸಲ್‌ಗಳ ಚಟುವಟಿಕೆಗಳನ್ನ ಸರ್ಕಾರ ಗಮನಿಸಬೇಕು. ವಿಶ್ವವಿದ್ಯಾಲಯ, ಸಾಹಿತಿಗಳು ಎಂದು ಹೇಳಿಕೊಳ್ಳುವವರು, ಬುದ್ಧಿ ಜೀವಿಗಳು ಈ ನಕ್ಸಲ್ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಾರೆ ಎಂದರು.