ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್: ಘಟನೆ ಬಗ್ಗೆ ಏನಂದ್ರು ಗೃಹಸಚಿವರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಎಎನ್‌ಎಫ್ ಗುಂಡಿಗೆ ಬಲಿಯಾದ ನಕ್ಸಲ್ ನಾಯಕ ವಿಕ್ರಂ ಗೌಡಗಾಗಿ ಕಳೆದ 20 ವರ್ಷಗಳಿಂದ ಹುಡುಕಾಟ ಜಾರಿಯಲ್ಲಿತ್ತು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಕ್ಸಲ್ ಯುಗ ಅಂತ್ಯವಾಗಿದೆ ಎಂದು ಅಂದುಕೊಂಡಿದ್ದೆವು. ಆದರೆ ಕಳೆದ ವಾರ ರಾಜು, ಲತಾ ಎಂಬ ಇಬ್ಬರು ನಕ್ಸಲರು ಪತ್ತೆಯಾಗಿದ್ದರು. ನಕ್ಸಲ್ ನೆರಳು ಕಾಣಿಸಿಕೊಂಡಿರುವುದು ಖಚಿತವಾದ ಹಿನ್ನೆಲೆಯಲ್ಲಿ ಕೂಂಬಿಂಗ್ ಆಪರೇಷನ್ ತೀವ್ರಗೊಳಿಸಲಾಗಿತ್ತು. ಈ ನಡುವೆ ವಿಕ್ರಂ ಗೌಡ ಬರುವ ಬಗ್ಗೆ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಮತ್ತಷ್ಟು ಅಲರ್ಟ್ ಮಾಡಲಾಗಿತ್ತು. ಆತನ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಎಎನ್‌ಎಫ್‌ಗೆ ಸೋಮವಾರ ರಾತ್ರಿ ಆತ ಮುಖಾಮುಖಿಯಾಗಿದ್ದ. ಜೊತೆಗೆ ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದ. ಈ ವೇಳೆ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ ಎಂದರು.

ಆತನ ಜತೆಯಲ್ಲಿದ್ದ ಇಬ್ಬರು ಮೂವರು ತಪ್ಪಿಸಿಕೊಂಡಿದ್ದಾರೆ.ಅವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದ ಗೃಹ ಸಚಿವರು, ನಕ್ಸಲರನ್ನು ಮುಖ್ಯ ವೇದಿಕೆಗೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ. ಹಿಂದೆ ಪಾವಗಡ ಭಾಗದಲ್ಲಿ ನಕ್ಸಲರನ್ನು ಮಾತನಾಡಿ ಮುಖ್ಯವೇದಿಕೆಗೆ ಕರೆತರಲಾಗಿತ್ತು. ಈಗಲೂ ಈ ಪ್ರಯತ್ನ ನಡೆಯುತ್ತಿದೆ. ಶರಣಾಗಲು ಬಯಸುವ ನಕ್ಸಲರಿಗೆ ಸಾಮಾನ್ಯ ಬದುಕು ನಡೆಸಲು ಸರ್ಕಾರ ಅವಕಾಶ ಮಾಡಿಕೊಡಲಿದೆ. ಅರಣ್ಯ ಭಾಗದಲ್ಲಿದ್ದು, ಪೊಲೀಸರ ಮೇಲೆ ತಪ್ಪಿಸಿಕೊಂಡು ಹೋಗಲು ಪ್ರಯತ್ನ ಮಾಡಿದರೆ ಈ ರೀತಿ ಘಟನೆ ಸಹಜ ಎಂದು ಸಮರ್ಥಿಸಿಕೊಂಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!