ಹೊಸದಿಗಂತ ಡಿಜಿಟಲ್ ಡೆಸ್ಕ್:
ಅದು 2003..ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮೊದಲ ಬಾರಿ ಸರ್ಕಾರಿ ಗುಂಡಿನ ಮೊರೆತ ಕೇಳಿಸಿತ್ತು.
ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟು ಕೈದಾರೆಯ ದಿ.ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ಅಂದು 2003 ನ.17ರಂದು ನಸುಕಿಗೆ ನಡೆದ ನಕ್ಸಲರು ಹಾಗೂ ಪೊಲೀಸರ ನಡುವಿನ ಗುಂಡಿನ ಚಕಮಕಿ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.
ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಹತರಾಗಿದ್ದರು. ಗುಂಡಿನ ದಾಳಿಗೆ ಮಣ್ಣಿನ ಮನೆಯ ಗೋಡೆಗಳು ಸಂಪೂರ್ಣ ಛಿದ್ರಗೊಂಡಿತ್ತು. ಮನೆಯೊಳಗೆ ರಕ್ತದ ಕೋಡಿಯೇ ಹರಿದಿತ್ತು. ಭಯದ ವಾತಾವರಣದಲ್ಲಿ ಈ ಮನೆಯು ವಾಸಕ್ಕೆ ಅಯೋಗ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿ ಮನೆಮಂದಿ ಮನೆಯನ್ನೇ ಬಿಟ್ಟಿದ್ದರು. ಮಧ್ಯಪ್ರವೇಶಿಸಿದ ಸರ್ಕಾರದಿಂದ ಹೊಸ ಮನೆ ನಿರ್ಮಿಸಿಕೊಡುವ ಭರವಸೆಯು ಮೊಳಗಿತ್ತು. ಆದರೆ ಇದಾವುದು ಕೂಡಾ ಈವರೆಗೆ ಕೈಗೂಡಿಲ್ಲ