ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಎನ್‌ಸಿಪಿ ಮುಖಂಡ ಬಾಬಾ ಸಿದ್ದೀಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಂಜಾಬ್‌ನ ಆಕಾಶ್‌ದೀಪ್ ಕರಜ್‌ಸಿಂಗ್ ಗಿಲ್‌ನನ್ನು (22) ಮುಂಬೈ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ದರೋಡೆಕೋರರ ವಿರೋಧಿ ಕಾರ್ಯಪಡೆಯ ಸಹಕಾರದೊಂದಿಗೆ ಮುಂಬೈ ಪೊಲೀಸ್ ಅಪರಾಧ ವಿಭಾಗವು ಫಾಜಿಲ್ಕಾ ಜಿಲ್ಲೆಯ ಪಕ್ಕಾ ಚಿಸ್ತಿ ಗ್ರಾಮದ ಗಿಲ್‌ನನ್ನು ಬಂಧಿಸಿದೆ.
ಮಾಜಿ ಸಚಿವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ 24ನೇ ಆರೋಪಿ ಈತ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.