ನಾಗಾಲ್ಯಾಂಡ್​ನ ಮುಖ್ಯಮಂತ್ರಿಯಾಗಿ ಐದನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಎನ್‌ಡಿಪಿಪಿ ನಾಯಕ ನೆಫಿಯು ರಿಯೊ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನಾಗಾಲ್ಯಾಂಡ್​ನ ನೂತನ ಮುಖ್ಯಮಂತ್ರಿಯಾಗಿ ಎನ್‌ಡಿಪಿಪಿ ನಾಯಕ ನೆಫಿಯು ರಿಯೊ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸತತ ಐದನೇ ಬಾರಿಗೆ ರಿಯೋ ಅವರು ಸಿಎಂ ಆಗಿ ಆಯ್ಕೆಯಾಗಿದ್ದಾರೆ.

ರಾಜ್ಯಪಾಲ ಲಾ. ಗಣೇಶನ್‌ ಅವರು ನೇಫಿಯು ರಿಯೊ ಅವರಿಗೆ ಪ್ರಮಾಣವಚನ ಬೋಧಿಸಿದರು. ಜೊತೆಗೆ 9 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇವರ ಪೈಕಿ ಇಬ್ಬರು ಉಪ ಮುಖ್ಯಮಂತ್ರಿಗಳಾಗಿ ಮಾಣವಚನ ಸ್ವೀಕರಿಸಿದರು.

ಈ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲೂ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಭಾಗವಹಿಸಿದ್ದರು.

ನಾಗಾಲ್ಯಾಂಡ್‌ನಲ್ಲಿ ಮತ್ತೊಮ್ಮೆ ಎನ್‌ಡಿಪಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ. 60 ಸ್ಥಾನಗಳನ್ನು ಹೊಂದಿರುವ ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಮೈತ್ರಿಕೂಟ 37 ಸ್ಥಾನಗಳನ್ನು ಗೆದ್ದಿದೆ. ಎನ್‌ಡಿಪಿಪಿ 25, ಬಿಜೆಪಿ 12 ಸ್ಥಾನಗಳನ್ನು ಪಡೆದುಕೊಂಡಿದೆ. ಇದಲ್ಲದೆ ಎನ್‌ಸಿಪಿ 7, ಎನ್‌ಪಿಪಿ 5, ಸ್ವತಂತ್ರರು 4, ಲೋಕ ಜನಶಕ್ತಿ ಪಕ್ಷ, ಎನ್‌ಪಿಎಫ್ ಮತ್ತು ಆರ್‌ಪಿಐ 2-2 ಸ್ಥಾನಗಳನ್ನು ಮತ್ತು ಜೆಡಿಯು ಒಂದು ಸ್ಥಾನವನ್ನು ಪಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!