ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ತೊಡೆದುಹಾಕಬೇಕೇ? ಈ 8 ಮಾರ್ಗಳನ್ನು ಅನುಸರಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅನಾರೋಗ್ಯಕರ ಜೀವನಶೈಲಿ, ದೋಷಪೂರಿತ ಆಹಾರ ಕ್ರಮಗಳಿಂದಾಗಿ ಕೆಲವೊಮ್ಮ ನಮ್ಮ ದೇಹದಲ್ಲಿ ವಿಷಕಾರಿ ವಸ್ತುಗಳು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ ಮತ್ತು ಇದರಿಂದ ಕ್ರಮೇಣ ದೇಹದಲ್ಲಿ ಅನೇಕ ರೋಗಗಳಿಗೆ ಆಹ್ವಾನ ಕೊಟ್ಟಂತಾಗುತ್ತಿದೆ. ಆದ್ದರಿಂದ ಕಾಲಕಾಲಕ್ಕೆ ದೇಹದಿಂದ ವಿಷಕಾರಿ ಅಂಶ ಮುಕ್ತಗೊಳಿಸುವಿಕೆಯನ್ನು (ಡಿಟಾಕ್ಸ್ ) ಮಾಡುತ್ತಿರುವುದು ಅವಶ್ಯಕ. ಇದನ್ನು ಮಾಡಲು ಹಲವು ಮಾರ್ಗಗಳಿವೆ. ಈ ಲೇಖನದಲ್ಲಿ ಡಿಟಾಕ್ಸ್‌ ಗಳಿಂದ ದೇಹವನ್ನು ಸ್ವಚ್ಛಗೊಳಿಸುವ 8 ಮಾರ್ಗಗಳ ಕುರಿತಾಗಿ ಮಾಹಿತಿ ನೀಡಲಾಗಿದೆ. ಸಾಧ್ಯವಾದಷ್ಟು ಈ ಕ್ರಮಗಳನ್ನು ಅನುಸರಿಸಿ.
1.ಪ್ರತಿನಿತ್ಯ ದೇಹಕ್ಕೆ ಅಗತ್ಯವಿರುವಷ್ಟು ಶುದ್ಧ ನೀರನ್ನು ಸೇವಿಸಿ. ನೀರು ದೇಹದಲ್ಲಿನ ಅನಗತ್ಯ ರಾಸಾಯನಿಕಗಳನ್ನು ಮತ್ತು ಜೈವಿಕ ಕಶ್ಮಲಗಳನ್ನು ನಿವಾರಿಸುತ್ತದೆ.
2. ದಿನಕ್ಕೆ ಐದರಿಂದ ಒಂಬತ್ತು ಬಾರಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.
3. ಕರುಳಿನ ಕ್ರಮಬದ್ಧತೆಯನ್ನು ಕಾಪಾಡಿಕೊಳ್ಳಲು ನಿಮ್ಮ ಆಹಾರ ಕ್ರಮದಲ್ಲಿ ತರಕಾರಿಗಳು, ಹಣ್ಣುಗಳು, ಬೀಜಗಳು ಮತ್ತು ಧಾನ್ಯಗಳಿಂದ ಕೂಡಿದ ಆಹಾರ ಪದ್ಧತಿಯನ್ನು ಅನುಸರಿಸಿ.
4. ಎಲೆಕೋಸಿನ ಗೆಡ್ಡೆ, ಪಲ್ಲೆಹೂವು, ಬೆಳ್ಳುಳ್ಳಿ, ಈರುಳ್ಳಿ, ಲೀಕ್ಸ್ ಮತ್ತು ಗ್ರೀನ್ ಚಹಾ ಸೇರಿದಂತೆ ವಿಟಮಿನ್ ಮತ್ತು ಕ್ಯಾಲ್ಶಿಯಂ ಸಮೃದ್ಧ ತರಕಾರಿಗಳನ್ನು ಸೇವಿಸಿ. ಇವುಗಳು ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದುಹಾಕುತ್ತವೆ.
5. ಸಾಕಷ್ಟು ಪ್ರಮಾಣದ ನೇರ ಪ್ರೋಟೀನ್ ಗಳನ್ನು ಸೇವಿಸಿ, ಇದು ದೇಹಕ್ಕೆ ಅಗತ್ಯವಾದ ನಿರ್ವಿಶೀಕರಣ ಕಿಣ್ವವಾದ ʼಗ್ಲುಟಾಥಿಯೋನ್‌ʼನ ಅತ್ಯುತ್ತಮ ಮಟ್ಟವನ್ನು ಕಾಪಾಡಿಕೊಳ್ಳಲು ಅತ್ಯಂತ ಸಹಕಾರಿ.
6.ಆರೋಗ್ಯಕರ ಆಹಾರ ಕ್ರಮವನ್ನು ಅನುಸರಿಸಲು ಮಲ್ಟಿವಿಟಮಿನ್/ಮಲ್ಟಿಮಿನರಲ್ ಆಹಾರಗಳನ್ನು ತೆಗೆದುಕೊಳ್ಳುವ  ಆಸಕ್ತಿ ಹೊಂದಿದ್ದರೆ, ನಿಮ್ಮ ದೇಹಪ್ರಕೃತಿಗೆ ಸೂಕ್ತವಾದ ಆಹಾರ ಕ್ರಮದ ಬಗ್ಗೆ ತಿಳಿದುಕೊಳ್ಳಲು ಪೌಷ್ಟಿಕ ತಜ್ಞರನ್ನು ಸಂಪರ್ಕಿಸಿ.
7. ಕೆಫೀರ್ ಪಾನೀಯ, ಮೊಸರು, ಕಿಮ್ಚಿ ಮತ್ತು ಸೌರ್‌ಕ್ರಾಟ್‌ (ಎಲೆಕೋಸು ಖಾದ್ಯ) ನಂತಹ ನೈಸರ್ಗಿಕ ಪೊಷಕಾಂಶ ಸಮೃದ್ಧ ಆಹಾರಗಳನ್ನು ಸೇವಿಸಿ. ಆರೋಗ್ಯಕ್ಕೆ ಉತ್ತಮ ಶಕ್ತಿ ಹಾಗೂ ಪೋಷಣೆಯನ್ನು ನೀಡುವುದಲ್ಲದೆ, ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ನಿವಾರಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!