ಸಾಮಾಜಿಕ ಜಾಲತಾಣದಗಳಲ್ಲಿ 30ಡೇಸ್ ಚಾಲೆಂಜ್, 60 ಡೇಸ್ ಚಾಲೆಂಜ್ ಸದಾ ವೈರಲ್ ಆಗುತ್ತದೆ. ಅದೇ ರೀತಿ ಈ ಬಾರಿ ನೀವು ಸಣ್ಣ ಚಾಲೆಂಜ್ ಒಂದನ್ನು ಕೈಗೊಳ್ಳಿ. ಚಾಲೆಂಜ್ ಮುಗಿಯುವಾಗ ನಿಮ್ಮ ಜೀವನ ಬದಲಾಗುತ್ತದೆ. ಅದೇ ಲೈಫ್‌ಸ್ಟೈಲ್ ನಿಮಗೆ ರೂಢಿಯಾಗುತ್ತದೆ. ಏನೆಲ್ಲಾ ಮಾಡ್ಬೇಕು ನೋಡಿ..
1. ನಿಮ್ಮ ಕೆಲಸ, ನಿಮ್ಮ ದಿನಚರಿ ಆಧಾರದ ಮೇಲೆ ಒಂದು ಟೈಬ್‌ಟೇಬಲ್ ತಯಾರಿಸಿ, ಇದರಲ್ಲಿ ವ್ಯಾಯಾಮಕ್ಕೆ ಜಾಗ ಕೊಡಿ.
2. ಒಂದು ದಿನವೂ ಮಲಗಿದ ಹಾಸಿಗೆಯನ್ನು ಹಾಗೇ ಬಿಟ್ಟು ಹೋಗಬೇಡಿ, ಏಳುವಾಗ ಎಲ್ಲವನ್ನೂ ಕ್ಲೀನ್ ಮಾಡಿಯೇ ಹೋಗಿ.
3. ಒಂದು ತಿಂಗಳು ಅವಶ್ಯಕತೆ ಇಲ್ಲದ ಏನನ್ನೂ ನಾನು ಕೊಳ್ಳೋದಿಲ್ಲ ಎಂದು ಪ್ರತಿಜ್ಞೆ ಮಾಡಿ, ಬಳಕೆ ಮಾಡದ ವಸ್ತು ಖರೀದಿ ಬೇಡ.
4. ಯಾವುದೇ ಕೆಲಸವನ್ನು ಪೆಂಡಿಂಗ್ ಇಡಬೇಡಿ, ಆಮೇಲೆ ಮಾಡ್ತೀನಿ ಎಂದು ಹೇಳಬೇಡಿ, ಕೆಲಸ ಬಂದ ಐದು ಸೆಕೆಂಡ್ ಒಳಗೆ ರಿಯಾಕ್ಟ್ ಮಾಡಿ.
5.ಒಂದು ತಿಂಗಳು ಮನೆಯಲ್ಲಿ ಮಾಡಿದ ಅಡುಗೆ ತಿನ್ನಿ, ಪ್ರೋಟೀನ್‌ಗೆ ಫಸ್ಟ್ ಪ್ರಿಯಾರಿಟಿ ಕೊಡಿ.
6. ಒಂದು ತಿಂಗಳು ಮನೆಯ ಹೊರಗಿನ ಜಂಕ್ ಫುಡ್ ಮುಟ್ಟಬೇಡಿ( ಒಂದು ತಿಂಗಳು ಮಾತ್ರ ಎಂದು ಮನಸ್ಸು ಮಾಡಿ, ಆಮೇಲೆ ಜಂಕ್ ಫುಡ್ ಇಷ್ಟ ಆಗೋದೇ ಇಲ್ಲ)
7.ಒಂದು ತಿಂಗಳು ಸಕ್ಕರೆಗೆ ಗುಡ್‌ಬೈ ಹೇಳಿ.
ಪ್ರತಿದಿನ ಒಂದೇ ಸಮಯಕ್ಕೆ ಏಳಿ.
8. ರಾತ್ರಿ 10 ಗಂಟೆ ನಂತರ ಎದ್ದಿರಬೇಡಿ, ಮಲಗುವ ಒಂದು ಗಂಟೆ ಮುನ್ನ ಮೊಬೈಲ್ ಮುಟ್ಟಬೇಡಿ.
9. ಕಷ್ಟ ಎನಿಸಿದರೂ ಪರವಾಗಿಲ್ಲ, ಗೀವ್ ಅಪ್ ಮಾಡದೇ ಒಂದು ವಾರ ಮಾಡಿ, ಆಮೇಲೆ ಕಷ್ಟ ಎನಿಸೋದಿಲ್ಲ.
10. ನಿಮ್ಮ ಮೆದುಳಿಗೆ ಇಷ್ಟವಾಗುವ ಆಕ್ಟಿವಿಟಿ ಪ್ರತಿದಿನ ಅರ್ಧ ಗಂಟೆ ಮಾಡಿ.