September 22, 2026
Tuesday, September 22, 2026
spot_img

ನೀಟ್‌ ಪರೀಕ್ಷೆ ರದ್ದು: 650 ಅಂಕ ನಿರೀಕ್ಷಿಸಿದ್ದ ವಿದ್ಯಾರ್ಥಿ ನೇಣಿಗೆ ಶರಣು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಈ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬರುತ್ತದೆ ಎಂದು ನಿರೀಕ್ಷಿಸಿದ್ದ ಯುವಕನೊಬ್ಬ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ.

22 ವರ್ಷದ ರಾಜಸ್ಥಾನದ ಸಿಕಾರ್‌ನ ಯುವಕ ಪ್ರದೀಪ್‌ ಮೇಘವಾಲ್‌ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಈ ಬಾರಿ ಪರೀಕ್ಷೆ ಚೆನ್ನಾಗಿ ಬರೆದಿದ್ದೇನೆ, ಉತ್ತಮ ಅಂಕ ಬರುತ್ತದೆ ಎಂದು ಪೋಷಕರಿಗೆ ಪ್ರದೀಪ್‌ ಹೇಳಿದ್ದ. ರಿಸಲ್ಟ್‌ಗಾಗಿ ಆತ ಕಾಯುತ್ತಿದ್ದ. ಸಿಕಾರ್‌ನ ಬಾಡಿಗೆ ಮನೆಯಲ್ಲಿ ಸಹೋದರಿಯೊಂದಿಗೆ ವಾಸವಾಗಿದ್ದ ಪ್ರದೀಪ್‌ ಖಿನ್ನತೆಗೆ ಜಾರಿದ್ದ.

ಸಹೋದರಿ ಮನೆಯಲ್ಲಿ ಇಲ್ಲದ ವೇಳೆ ಪ್ರದೀಪ್‌ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮನೆಗೆ ಬಂದ ಸಹೋದರಿಗೆ ಆಘಾತವಾಗಿದ್ದು,ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪ್ರದೀಪ್‌ ಜೀವ ಮನೆಯಲ್ಲೇ ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !