ಹೊಸದಿಗಂತ ವರದಿ, ಕುಶಾಲನಗರ:
ಅಂಗನವಾಡಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬಿಸಿ ಸಾಂಬಾರ್ ಮಗುವಿನ ತೊಡೆಯ ಮೇಲೆ ಬಿದ್ದ ಪ್ರಸಂಗ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೆ ಕೂಡಿಗೆ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.
ಪ್ರತಿನಿತ್ಯದಂತೆ ಮಧ್ಯಾಹ್ನದ ಸಮಯದಲ್ಲಿ ಅಂಗನವಾಡಿ ಮಕ್ಕಳಿಗೆ ಊಟ ಬಡಿಸುವ ಸಂದರ್ಭ ಅಂಗನವಾಡಿ ಸಹಾಯಕಿಯ ಕೈ ತಪ್ಪಿನಿಂದ ಅನ್ನಕ್ಕೆ ಸಾಂಬಾರ್ ಬಡಿಸುವ ಸಂದರ್ಭ ಕೈ ಜಾರಿ ಬಿಸಿ ಸಾಂಬಾರ್ ತನ್ಯಮಿ ಎಂಬ ಮಗುವಿನ ತೊಡೆಯ ಮೇಲೆ ಬಿದ್ದು ಗಾಯಗಳುಂಟಾಗಿದೆ.
ತಕ್ಷಣವೇ ಅಂಗನವಾಡಿ ಸಿಬ್ಬಂದಿಗಳು ಮಗುವಿಗೆ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ವಿಷಯ ತಿಳಿದ ಸೋಮವಾರಪೇಟೆ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಶ್ರೀ ದೇವಿ, ಮೇಲ್ವಿಚಾರಕಿ ಸಾವಿತ್ರಮ್ಮ, ರಂಜಿತಾ ಅವರು ಅಂಗನವಾಡಿಗೆ ಭೇಟಿ ನೀಡಿ ಮಗುವಿಗೆ ಚಿಕಿತ್ಸೆ ಕೊಡಿಸುವ ಮತ್ತು ಅಂಗವಾಡಿ ಕಾರ್ಯಕರ್ತೆಯ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸ್ಧಳಕ್ಕೆ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ನಿರ್ದೇಶಕ ಬಿ.ಡಿ. ಅಣ್ಣಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.