November 24, 2026
Tuesday, November 24, 2026
spot_img

ತಡರಾತ್ರಿಯವರೆಗೆ ನಡೆದ ಸಂಧಾನ ಯಶಸ್ವಿ: ಹಾವೇರಿಯಲ್ಲಿ ಕಬ್ಬಿನ ದರ ಸಮರಕ್ಕೆ ತೆರೆ, ಟನ್‌ಗೆ 3,225 ರೂ. ಫಿಕ್ಸ್!

ಹೊಸದಿಗಂತ ವರದಿ ಹಾವೇರಿ :

ಪ್ರಸ್ತುತ ಕಬ್ಬಿನ ದರ ನಿಗದಿ ಕುರಿತಂತೆ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ದರ ಸಂಘರ್ಷಕ್ಕೆ ತಾತ್ವಿಕ ಅಂತ್ಯ ಸಿಕ್ಕಿದೆ. ಮಾತುಕತೆಯ ಅಂತಿಮ ಭಾಗವಾಗಿ ಸೋಮವಾರ ತಡರಾತ್ರಿ ಎರಡೂವರೆ ಹೊತ್ತಿಗೆ ಈ ಅಂತಿಮದರಕ್ಕೆ ರೈತರು ಸಮ್ಮತಿ ಸೂಚಿಸಿದ್ದು, ಪ್ರತಿ ಟನ್ ಕಬ್ಬಿಗೆ 3,225ಗಳನ್ನ ನೀಡಲು ಹಾವೇರಿ ಜಿಲ್ಲೆಯ ಕಬ್ಬು ಕಾರ್ಖಾನೆಗಳ ಮಾಲೀಕರು ಅಂತಿಮವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಕಳೆದ ಮೂರ್ನಾಲ್ಕು ತಿಂಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ತೆರೆ ಬಿದ್ದಂತಾಗಿದೆ.

ಕಬ್ಬಿನ ದರ ನಿಗದಿ ಕುರಿತಂತೆ ಹಾವೇರಿ ಜಿಲ್ಲಾಡಳಿತದ ಭವನದಲ್ಲಿ ಜಿಲ್ಲಾಧಿಕಾರಿ ಮತ್ತು ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮಧ್ಯಸ್ಥಿಕೆಯ ಸಭೆ ಯಶಸ್ವಿಯಾಗಿದೆ. ಈಗಾಗಲೇ ರೂ.3100ಗಳಿಗೆ ಒಪ್ಪಿಗೆ ಸೂಚಿಸಿದ್ದ ಕಾರ್ಖಾನೆ ಮಾಲೀಕರು ಇದೀಗ ಅಂತಿಮವಾಗಿ 3,225ಗಳನ್ನ ನೀಡಲು ಬದ್ದರಾಗಿದ್ದಾರೆ ಅಂತಿಮವಾಗಿ ರೈತರು 3600 ಪಟ್ಟನ್ನು ಸಡಿಲಿಸುವ ಮೂಲಕ ಸಕ್ಕರೆ ಕಾರ್ಖಾನೆಗಳ ವಾದಕ್ಕೆ ಮಣಿ ಹಾಕಿದಂತಾಗಿದೆ.

ಅಲ್ಲದೆ ಪ್ರಸ್ತುತ ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ದರ ಕೆಜಿಗೆ 40 ರಿಂದ 42 ರೂಪಾಯಿಗಳವರೆಗೆ ಇದ್ದು ಇದರ ಹೆಚ್ಚಳವಾದಲ್ಲಿ ಅಂದರೆ ಮುಕ್ತ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ 50 ಅಥವಾ ಅದಕ್ಕಿಂತ ಹೆಚ್ಚಳವಾದಲ್ಲಿ ಹೆಚ್ಚುವರಿ ಮೊತ್ತದಲ್ಲಿ ಶೇ.75ರಷ್ಟುನ್ನು ರೈತರಿಗೆ ಮತ್ತು ಇನ್ನುಳಿದ ಶೇಕಡ 25ರಷ್ಟನ್ನು ಸಕ್ಕರೆ ಕಾರ್ಖಾನೆಗಳಿಗೆ ಹಂಚಿಕೆ ಮಾಡುವ ನಿಟ್ಟಿನಲ್ಲಿ ಶರತ್ತುಗಳೊಂದಿಗೆ ಇದು ಪೂರ್ಣಗೊಂಡಿದೆ. ಇದಕ್ಕೆ ಸಕ್ಕರೆ ಕಾರ್ಖಾನೆಗಳು ಬದ್ಧವಾಗಿ ನಡೆದುಕೊಳ್ಳಬೇಕೆಂಬುದು ಕಬ್ಬು ಬೆಳೆಗಾರ ರೈತರ ಹಕ್ಕೋತ್ತಾಯ.

ಒಡ್ಟಿನಲ್ಲಿ ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ಕಬ್ಬಿನ ದರ ಸಮರಕ್ಕೆ ತೆರೆಬಿದ್ದಿದೆ.

Must Read