ನೀಲ್ ಕಿಚ್ಲು, ಲವ್​ ಆಫ್​ ಮೈ ಲೈಫ್: ಮಗನೊಂದಿಗಿನ ಸುಂದರ ಕ್ಷಣ ಹಂಚಿಕೊಂಡ ಕಾಜಲ್ ಅಗರ್ವಾಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ನಟಿ ಕಾಜಲ್ ಅಗರ್ವಾಲ್ ತಾಯಿಯಾದ ಖುಷಿಯಲ್ಲಿದ್ದಾರೆ. ತಮ್ಮ ಸಮೇವನ್ನುಮಗನೊಂದಿಗೆ ಖುಷಿಯಿಂದ ಕಳೆಯುತ್ತಿದ್ದಾರೆ.
ಮೇ 8 ರಂದು ಕಾಜಲ್ ಮೊದಲ ಬಾರಿಗೆ ತಮ್ಮ ಮಗನ ಫೋಟೋ ಪ್ರಕಟಿಸಿದ್ದರು. ಇದೀಗ ಮತ್ತೊಮ್ಮೆ ‘ನೀಲ್ ಕಿಚ್ಲು, ಲವ್​ ಆಫ್​ ಮೈ ಲೈಫ್​.. ನನ್ನ ಹೃದಯ ಬಡಿತ’ ಎಂಬ ಶೀರ್ಷಿಕೆ ನೀಡಿ ಮಗನನ್ನು ಎದೆಯ ಮೇಲೆ ಮಲಗಿಸಿಕೊಂಡ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಗಲೂ ನೀಲ್ ಮುಖ ಕಾಣಿಸಿದಂತೆ ಕಾಜಲ್ ಫೋಟೋ ಶೇರ್​ ಮಾಡಿದ್ದಾರೆ.
ಕಾಜಲ್ ಕೊನೆಯ ಬಾರಿಗೆ ತೆಲುಗು ಚಿತ್ರ ‘ಆಚಾರ್ಯ’ (2022) ದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷ ಏಪ್ರಿಲ್‌ನಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಕಾಜಲ್ ಅವರ ಮುಂಬರುವ ಚಿತ್ರಗಳಲ್ಲಿ ‘ಕರುನಾಗಪಿಯಂ’ (ತಮಿಳು), ‘ಘೋಸ್ತಿ’ (ತಮಿಳು) ಮತ್ತು ‘ಉಮಾ’ (ಹಿಂದಿ) ಸಿನಿಮಾಗಳಲ್ಲಿ ನಟಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!