ಪಾಕ್‌ ವಿರುದ್ಧದ ಪಂದ್ಯದಲ್ಲಿ ಮಾಸ್ಕ್‌ ಧರಿಸಿ ಆಡಿದ ವಿಂಡೀಸ್‌ ತಂಡ: ಕಾರಣ ಕೊರೋನಾ ಅಲ್ಲವೇ ಅಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಇಂದು ಮುಲ್ತಾನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಭರ್ಜರಿ ಗೆಲುವು ಸಾಧಿಸಿತು. ಆದರೆ ಈ ಪಂದ್ಯ ಬೇರೊಂದು ವಿಚಿತ್ರ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಪಾಕ್‌‌ ತಂಡ ಬ್ಯಾಟಿಂಗ್‌ ನಡೆಸುವಾಗ ವಿಂಡೀಸ್ ಆಟಗಾರರು ಮುಖಗವಸು( ಮಾಸ್ಕ್‌) ಧರಿಸಿ ಕಣಕ್ಕಿಳಿದ ದೃಶ್ಯಗಳು ವೈರಲ್‌ ಆಗುತ್ತಿದೆ.

ಇದೇನಪ್ಪಾ ಪಾಕ್‌ ನಲ್ಲಿ ಈ ಪರಿ ಕೊರೋನಾ ಹೆಚ್ಚಿದೆಯಾ ಎಂದು ಕೊಳ್ಳಬೇಡಿ. ಅಷ್ಟಕ್ಕೂ ವಿಂಡೀಸ್‌ ಆಟಗಾರರು ಮಾಸ್ಕ್‌ ಧರಿಸಿದ್ದು ಬೇರೊಂದು ಅನಿವಾರ್ಯ ಕಾರಣಕ್ಕೆ. ವಿಂಡೀಸ್‌ ಆಟಗಾರರು ಮಾಸ್ಕ್‌ ಧರಿಸಿ ಕಣಕ್ಕಿಳಿದಿದ್ದು ಏಕೆಂದು ನೇರಪ್ರಸಾರ ವೀಕ್ಷಿಸುತ್ತಿದ್ದ ಪ್ರೇಕ್ಷರಿಗೂ  ಮೊದಲಿಗೆ ಅರ್ಥವಾಗಲಿಲ್ಲ.

ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಮುಲ್ತಾನ್‌ ನಗರದಲ್ಲಿ ಎದ್ದ ಧೂಳಿನ ಬಿರುಗಾಳಿ ಕಾರಣದಿಂದ ಪಂದ್ಯಕ್ಕೆ ಅಡಚಣೆ ಉಂಟಾಯಿತು.
ಗಾಳಿಯಲ್ಲಿ ತೇಲಿಬರುತ್ತಿದ್ದ ದೂಳು, ಮತ್ತು ಮರಳಿನ ಕಣಗಳಿಂದ ಮುಖವನ್ನು ರಕ್ಷಿಸಿಕೊಳ್ಳಲು ವಿಂಡೀಸ್‌ ಆಟಗಾರರು ಅನಿವಾರ್ಯವಾಗಿ ಮಾಸ್ಕ್‌ ಧರಿಸಿ ಆಡಲಾರಂಭಿಸಿದರು. ಆಬಳಿಕ ಬಿರುಗಾಳಿ ತೀವ್ರತೆ ಪಡೆದಿದ್ದರಿಂದ ಪಂದ್ಯದ ಮೊದಲ ಇನ್ನಿಂಗ್ಸ್‌ನ 33 ಓವರ್‌ಗಳ ನಂತರ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಆಟಕ್ಕೆ ಅಡ್ಡಿಯಾದಾಗ ಪಾಕಿಸ್ತಾನ 5 ವಿಕೆಟ್‌ ಗೆ 155 ರಸ್‌ ಕಲೆಹಾಕಿತ್ತು. ಸ್ವಲ್ಪ ವಿರಾಮದ ನಂತರ ಆಟವನ್ನು ಪುನರಾರಂಭಿಸಲಾಯಿತಾದರೂ, ಕೆಟ್ಟ ಹವಾಮಾನದ ಕಾರಣ ಪಂದ್ಯವನ್ನು ಎರಡೂ ತಂಡಗಳಿಗೆ ತಲಾ 48 ಓವರ್‌ಗಳಿಗೆ ಇಳಿಸಲಾಯಿತು.

ಆಲ್ರೌಂಡರ್‌ ಶದಾಬ್‌ ಅಮೂಲ್ಯ 86 ರನ್ ಹಾಗೂ ಇಮಾಮ್‌ ಉಲ್‌ ಹಕ್‌ 62 ರನ್‌ ಗಳ ಬಲದಿಂದ ಪಾಕಿಸ್ತಾನವು 48 ಓವರ್‌ಗಳಲ್ಲಿ 269/9 ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ವಿಂಡೀಸ್‌ 37.2 ಓವರ್‌ ಗಳಲ್ಲಿ ಕೇಲವ 216 ರನ್‌ ಕಲೆಹಾಕಿ 120 ರನ್‌ ಗಳಿಂದ ಸೋಲಿಗೆ ಶರಣಾಯಿತು. ಜೊತೆಗೆ ಪಾಕ್‌ ವಿರುದ್ಧ ಸರಣಿ ಸೋಲಿನ  ಮುಖಭಂಗಕ್ಕೆ ಈಡಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!