ಎನ್‌ಇಪಿ ಎಂಬ ಭಾರತೀಯ ಶಿಕ್ಷಣ ವ್ಯವಸ್ಥೆಯ ಗೇಮ್ ಚೇಂಜರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರಿಟಿಷರ ಕಾಲದಲ್ಲಿ ಜಾರಿಗೆ ತರಲಾಗಿದ್ದ ಶಿಕ್ಷಣ ವ್ಯವಸ್ಥೆಗೆ ಪರ್ಯಾಯವಾಗಿ ಈಗಿನ ಕಾಲದ ಅಗತ್ಯತೆಗೆ ತಕ್ಕಂತಹ ಕೌಶಲ್ಯಾಧರಿತ ಶಿಕ್ಷಣ ವ್ಯವಸ್ಥೆ ತರಲಾಗಿದೆ. ದೇಶದ ಯುವ ಪೀಳಿಗೆಯ ಉಜ್ವಲ ಭವಿಷ್ಯಕ್ಕೆ ಅತ್ಯಂತ ಅನಿವಾರ್ಯವಾಗಿತ್ತು. ಈ ದಿಸೆಯಲ್ಲಿ 2020ರ ಜುಲೈ 29ರಂದು ಜಾರಿಗೆ ತರಲಾದ ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಶೈಕ್ಷಣಿಕ ವ್ಯವಸ್ಥೆಯ ದಿಕ್ಕನ್ನೇ ಬದಲಾಯಿಸುವ ಪ್ರಮುಖ ಹೆಜ್ಜೆಯಾಗಿದೆ.

ಈಗಾಗಲೇ 2 ವರ್ಷಗಳನ್ನು ಪೂರೈಸಿರುವ ಉಪಕ್ರಮ ದೇಶದ ಶೈಕ್ಷಣಿಕ ಪದ್ಧತಿಯು ಗಮನಾರ್ಹವಾಗಿ ರೂಪಾಂತರಗೊಳ್ಳುವುದರೊಂದಿಗೆ ಉದ್ಯೋಗದಾತರ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸು ವಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಲಿದೆ. ಒಟ್ಟಿನಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಎನ್‌ಇಪಿ ಗೇಮ್ ಚೇಂಜರ್ ಆಗಲಿದ್ದು ಆ ಕುರಿತ ಮಾಹಿತಿ ಇಲ್ಲಿದೆ.

ಭರವಸೆಯ ವೃತ್ತಿಪರ ಕೋರ್ಸ್

ಎನ್‌ಇಪಿ ಹವ್ಯಾಸವನ್ನು ವೃತ್ತಿ ಅವಕಾಶವಾಗಿ ಪರಿಗಣಿಸುವ ಮೂಲಕ ಅದಕ್ಕೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಕಡಿಮೆ ಮಾಡುವುತ್ತದೆ. ಮಾತ್ರಲ್ಲದೆ, ವಿದ್ಯಾರ್ಥಿಗಳಿಗೆ ಭರವಸೆಯ ವೃತ್ತಿಪರ ಕೋರ್ಸ್‌ಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ಜತೆಗೆ ನೂತನ ಶಿಕ್ಷಣ ನೀತಿಯು ದೇಶದ ಮಾನವಶಕ್ತಿಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಶೈಕ್ಷಣಿಕ ಅಭ್ಯಾಸಗಳಲ್ಲಿ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಶಿಕ್ಷಣದೊಂದಿಗೆ ಸಂವಹನ, ನಾಯಕತ್ವದಂತಹ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡುತ್ತದೆ.

ಪ್ರಾಯೋಗಿಕ ಕಲಿಕೆಗೆ ದಾರಿ
ಜಗತ್ತು ಕೈಗಾರಿಕಾ ಕ್ರಾಂತಿಯ ನಾಲ್ಕನೇ ಹಂತದತ್ತ ಸಾಗುತ್ತಿರುವಾಗ, ಉದ್ಯೋಗದಾತರು ಡಿಜಿಟಲ್ ಸಾಕ್ಷರತೆ ಮತ್ತು ಉದ್ಯಮ-ಸಂಬಂಧಿತ ಕೌಶಲ್ಯಗಳ ಜೊತೆಗೆ ಕಾರ್ಯಕ್ಷೇತ್ರದ (ಡೊಮೇನ್)ಪರಿಣತಿ ಹೊಂದಿ ರುವ ಪ್ರತಿಭೆ ಹುಡುಕುತ್ತಿದ್ದಾರೆ. ೨೦೨೦ರ ಎನ್‌ಇಪಿ ಭಾರತೀಯ ಶೈಕ್ಷಣಿಕ ವ್ಯವಸ್ಥೆಯ ದಿಕ್ಕು ಬದಲಾಯಿಸುವ ಪ್ರಮುಖ ಹೆಜ್ಜೆಯಾಗಿದೆ. ಹೀಗಾಗಿ ಯೇ ಪ್ರಾಯೋಗಿಕ ಕಲಿಕೆಗೆ ಎನ್‌ಇಪಿಯಲ್ಲಿ ಒತ್ತು ನೀಡಲಾಗಿದೆ.

ಉದ್ಯೋಗ ಒದಗಿಸುವ ಶಿಕ್ಷಣಕ್ಕೆ ಒತ್ತು

ಇದರ ಹೊರತಾಗಿ ಎನ್‌ಇಪಿ ಉದ್ಯೋಗದ ಮೇಲೂ ಕೇಂದ್ರೀಕರಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸರಿಯಾದ ಕೌಶಲ್ಯಗಳನ್ನು ಒದಗಿಸುವಂತಹ ಶಿಕ್ಷಣಕ್ಕೆ ಆದ್ಯತೆ ನೀಡುತ್ತದೆ. ಈ ಉಪಕ್ರಮದ ಮೂಲಕ ಸರ್ಕಾರ ಸುಸ್ಥಿರ ಅಭಿವೃದ್ಧಿಗಾಗಿ ೨೦೩೦ರ ಕಾರ್ಯಸೂಚಿ ಗಡುವನ್ನು ಇರಿಸಿಕೊಂಡಿದೆ. ಜತೆಗೆ ಎಲ್ಲರನ್ನೂ ಒಳಗೊಳ್ಳುವ ಮತ್ತು ಎಲ್ಲರಿಗೂ ಸಮಾನ ಶಿಕ್ಷಣ ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬರಿಗೂ ಜೀವಮಾನದ ಕಲಿಕೆಯ ಅವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!