Wednesday, June 29, 2022

Latest Posts

ಮೂರು ದಿನಗಳ ಭಾರತದ ಪ್ರವಾಸದಲ್ಲಿ ನೇಪಾಳ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನೇಪಾಳದ ಪ್ರಧಾನಿ ಶೇರ್ ಸಿಂಗ್ ದೇವುಬಾ ಅವರು ಇಂದು ಭಾರತಕ್ಕೆ ಆಗಮಿಸಲಿದ್ದಾರೆ.ಭಾರತದಲ್ಲಿ ಮೂರು ದಿನ ಇರಲಿದ್ದು, ಏಪ್ರಿಲ್ 3 ರಂದು ಬನಾರಸ್​ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ನೇಪಾಳದ ಪ್ರಧಾನಿ ಭಾರತ ಭೇಟಿಯೂ ತುಂಬಾ ಮಹತ್ವದ್ದಾಗಿದ್ದು, ನೇಪಾಳ ಮತ್ತು ಭಾರತದ ನಡುವಿನ ಸಂಬಂಧ ಕಳೆದ ಕೆಲವು ವರ್ಷಗಳಿಂದ ಉತ್ತಮವಾಗಿಲ್ಲ. ಹೀಗಾಗಿ ನೇಪಾಳದ ಪ್ರಧಾನಿಯ ಮೂರು ದಿನಗಳ ಭಾರತ ಭೇಟಿಯೂ ಅತ್ಯಂತ ಮಹತ್ವ ಪಡೆದಿದೆ.
ಬನಾರಸ್​ ನಲ್ಲಿ ಕಾಲ ಭೈರವ ಮತ್ತು ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಅವರು ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯದ ಪ್ರತಿಕೃತಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss