Sunday, November 27, 2022

Latest Posts

ಸರಣಿ ಭೂಕಂಪಕ್ಕೆ ನಡುಗಿದ ನೇಪಾಳ, ಆರು ಸಾವು: ದೆಹಲಿ ಸುತ್ತಮುತ್ತಲೂ ಕಂಪನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದ ದೋಟಿ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಪ್ರಬಲ ಭೂಕಂಪನವಾಗಿದ್ದು, ಮನೆ ಕುಸಿದು ಆರು ಮಂದಿ ಮೃತಪ್ಟಿದ್ದಾರೆ.

ಹಲವು ಮನೆಗಳು ಕುಸಿದಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ. ನೇಪಾಳದಲ್ಲಿ ಮಂಗಳವಾರ ರಾತ್ರಿ ಮೊದಲ ಬಾರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 4.9 ಎಂದು ದಾಖಲಾಗಿತ್ತು. ಬುಧವಾರ ರಾತ್ರಿ 1:57 ಕ್ಕೆ ಮತ್ತೊಂದು ಬಾರಿ ಭೂಕಂಪನದ ಅನುಭವಾಗಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 6.3 ರಷ್ಟಿತ್ತು. ಎರಡನೇ ಬಾರಿಗೆ ಆದ ಭೂಕಂಪನದ ತೀವ್ರತೆಗೆ ಅಲೆಗಳು ಭಾರತದ ದೆಹಲಿ, ಗಾಜಿಯಾಬಾದ್, ನೋಯ್ಡಾ, ಗುರುಗ್ರಾಮ ಮತ್ತು ಲಖನೌ ಗ್ರಾಮಗಳನ್ನು ನಡುಗಿಸಿದೆ.

ದೆಹಲಿ ಸುತ್ತಮುತ್ತ ಭೂಕಂಪದ ಅನುಭವಕ್ಕೆ ಜನ ಬೆಚ್ಚಿಬಿದ್ದಿದ್ದಾರೆ, ತಕ್ಷಣವೇ ಮನೆಯಿಂದ ಹೊರಬಂದಿದ್ದಾರೆ. ಸುಮಾರು 10 ಸೆಕೆಂಡ್‌ಗಳ ಕಾಲ ಭೂಕಂಪನದ ಅನುಭವವಾಗಿದೆ. ಭೂಮಿಯ 10 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ರಾತ್ರಿ ನಂತರ ಮತ್ಯಾವುದೂ ತುರ್ತು ಕರೆ ಬಂದಿಲ್ಲ, ನೇಪಾಳದಲ್ಲಿ ಭೂಕಂಪನ ಕೇಂದ್ರವಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೆಸ್‌ಮಾಲಜಿ ಹೇಳಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ರಾತ್ರಿ ಭೂಕಂಪನದ ಬಗ್ಗೆ ಚರ್ಚೆಯಾಗಿದ್ದು, ಎಲ್ಲರೂ ತಮ್ಮ ಭಯ, ಅನುಭವವನ್ನು ಹಂಚಿಕೊಂಡಿದ್ದಾರೆ. ಹ್ಯಾಷ್‌ಟ್ಯಾಗ್ ಅರ್ಥ್‌ಕ್ವೇಕ್ ಟ್ರೆಂಡ್ ಆಗಿದೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!