ಅಂತರಾಷ್ಟ್ರೀಯ ಕ್ರಿಕೆಟಿಗನ ಮೇಲೆ ರೇಪ್‌ ಆರೋಪ: ಪ್ರಕರಣ ದಾಖಲಿಸಿದ 17 ವರ್ಷದ ಯುವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನೇಪಾಳದ ಸ್ಟಾರ್ ಲೆಗ್ ಸ್ಪಿನ್ನರ್ ಸಂದೀಪ್ ಲಾಮಿಚಾನೆ ವಿರುದ್ಧ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿದೆ. ಈ ಸುದ್ದಿ ಕೇಳಿ ಕ್ರಿಕೆಟ್ ಅಭಿಮಾನಿಗಳು ಶಾಕ್‌ ಆಗಿದ್ದಾರೆ. 17 ವರ್ಷ ವಯಸ್ಸಿನ ಸಂತ್ರಸ್ತೆ ಕ್ರಿಕೆಟಿಗನ ವಿರುದ್ಧ ಕಠ್ಮಂಡು ಪೊಲೀಸರಿಗೆ ದೂರು ಸಲ್ಲಿಸಿದ್ದಾಳೆ.
ವರದಿಯ ಪ್ರಕಾರ, ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ಆರೋಗ್ಯ ತಪಾಸಣೆಗಾಗಿ ಕಳುಹಿಸಲಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಕಠ್ಮಂಡು ವ್ಯಾಲಿ ಪೊಲೀಸ್ ಕಚೇರಿ ಮುಖ್ಯಸ್ಥ ರವೀಂದ್ರ ಪ್ರಸಾದ್ ಧನುಕ್ ಖಚಿತಪಡಿಸಿದ್ದಾರೆ.
ವರದಿಯ ಪ್ರಕಾರ, ದೂರು ನೀಡಿರುವ ಹದಿಹರೆಯದ ಹುಡುಗಿ ತಾನು ಲಮಿಚಾನೆ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾಳೆ. ವಾಟ್ಸಾಪ್ ಮತ್ತು ಸ್ನ್ಯಾಪ್‌ಚಾಟ್ ಮೂಲಕ ಅವನೊಂದಿಗೆ ಮಾತನಾಡುತ್ತಿದ್ದಳು. ಸಂದೀಪ್‌ ಆಕೆಯನ್ನು ಭೇಟಿಯಾಗಲು ಕರೆದಿದ್ದರು. ಸೆಪ್ಟೆಂಬರ್ 22 ರಂದು ನೇಪಾಳ ಕ್ರಿಕೆಟ್ ತಂಡದೊಂದಿಗೆ ಕೀನ್ಯಾಗೆ ತೆರಳುವ ಮುನ್ನ ಸಂದೀಪ್ ಲಮಿಚಾನೆ ನನ್ನನ್ನು ಪ್ರವಾಸಕ್ಕೆ ಕರೆದೊಯ್ದಿದ್ದರು. ಅಂದು ರಾತ್ರಿ ಹಿಂತಿರುವುದು ತಡವಾಗಿತ್ತು. ರಾತ್ರಿ 8 ಗಂಟೆಗೆ ಹೋಟೆಲ್ ಗೇಟ್‌ಗಳನ್ನು ಮುಚ್ಚಿದ್ದರಿಂದ ಹಾಸ್ಟೆಲ್​ಗೆ ಹಿಂತಿರುಗಲು ಸಾಧ್ಯವಾಗಿಲ್ಲ. ನನ್ನನ್ನು ಕಠ್ಮಂಡುವಿನ ಹೋಟೆಲ್​ನಲ್ಲಿ ಉಳಿಸಿಕೊಂಡಿದ್ದ ಸಂದೀಪ್‌ ನನ್ನ ಮೇಲೆ ಅತ್ಯಾಚಾರ ಎಸೆಗಿದ್ದಾರೆ ಎಂದು ಯುವತಿ ಹೇಳಿದ್ದಾಳೆ.
“ಪೊಲೀಸರು ಇಂತಹ ಗಂಭೀರ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ನಾವು ಸಂತ್ರಸ್ಥೆಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ್ದೇವೆ ಮತ್ತು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಕಠ್ಮಂಡು ಕಣಿವೆ ಪೊಲೀಸ್ ಕಚೇರಿ ಮುಖ್ಯಸ್ಥ ರವೀಂದ್ರ ಪ್ರಸಾದ್ ಧನುಕ್ ಹೇಳಿದ್ದಾರೆ.
ನೇಪಾಳ ಕ್ರಿಕೆಟ್ ತಂಡದ ನಾಯಕನೂ ಆಗಿರುವ ಸಂದೀಪ್‌ ಲಮಿಚ್ಚಾನೆ  ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ನಲ್ಲಿ ಆಡುತ್ತಿದ್ದಾರೆ. ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಸಂದೀಪ್ 2018 ರಲ್ಲಿ ICC ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಷನ್ 2 ರಲ್ಲಿ ಪಂದ್ಯಾವಳಿಯ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಬೆಳಕಿಗೆ ಬಂದಿದ್ದರು. ಅದೇ ವರ್ಷ ಸೇಂಟ್ ಕಿಟ್ಸ್ ಮತ್ತು ನೆವಿಸ್‌ ತಂಡಕ್ಕೆ ಸಹಿ ಹಾಕುವ ಮೂಲಕ ಕೆರಿಬಿಯನ್ ಪ್ರೀಮಿಯರ್ ಲೀಗ್‌ಗೆ ಡ್ರಾಫ್ಟ್ ಆದ ನೇಪಾಳದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅದೇ ವರ್ಷ IPL ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ (ಈಗ ದೆಹಲಿ ಕ್ಯಾಪಿಟಲ್ಸ್) ತಂಡಕ್ಕೆ ಹರಾಜಾದರು. ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿದ ನೇಪಾಳದ ಮೊದಲ ಆಟಗಾರರಾಗಿ ಉಳಿದಿದ್ದಾರೆ.
ನೇಪಾಳಕ್ಕಾಗಿ 30 ಏಕದಿನ ಮತ್ತು 44 ಟಿ20 ಗಳನ್ನು ಆಡಿರುವ ಸಂದೀಪ್ ಕ್ರಮವಾಗಿ 69 ಮತ್ತು 85 ವಿಕೆಟ್‌ ಗಳನ್ನು ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!