ಆ್ಯಂಟಿಬಯಾಟಿಕ್‌ಗಳನ್ನು ಹೆಚ್ಚು ಬಳಸುತ್ತಿರುವ ಭಾರತೀಯರು: ಅಜಿತ್ರೋಮೈಸಿನ್ ನಂ1 ಸ್ಥಾನ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯರು ಆ್ಯಂಟಿಬಯೋಟಿಕ್‌ಗಳನ್ನು ಅತಿಯಾಗಿ ಬಳಸುತ್ತಿರುವುದಾಗಿ ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ವಿಶೇಷವಾಗಿ ಅಜಿತ್ರೊಮೈಸಿನ್ ಅನ್ನು ಎಲ್ಲಕ್ಕಿಂತ ಹೆಚ್ಚಾಗಿ ಬಳಸಲಾಗುತ್ತದೆ ಎಂಬ ವಿಚಾರ ‘ಲ್ಯಾನ್ಸೆಟ್’ ಎಂಬ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಈ ವಿಷಯಗಳು ಬಹಿರಂಗವಾಗಿವೆ.

ಈ ವರದಿಯ ಪ್ರಕಾರ..ಕೋವಿಡ್ ಸಮಯದಲ್ಲಿ ಮತ್ತು ಅದಕ್ಕೂ ಮೊದಲು ಕೂಡಾ ಭಾರತೀಯರು ಆ್ಯಂಟಿಬಯೋಟಿಕ್‌ಗಳನ್ನು ಅತಿಯಾಗಿ ಬಳಸುತ್ತಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಕೇಂದ್ರ ಔಷಧ ನಿಯಂತ್ರಣ ಮಂಡಳಿಯಿಂದ ಅನುಮೋದಿಸಲ್ಪಟ್ಟಿಲ್ಲ. ಕೇಂದ್ರ ಈ ಬಗ್ಗೆ ತಕ್ಷಣ ಸ್ಪಂದಿಸಿ ನಿಖರವಾದ ನೀತಿ ರೂಪಿಸಿ ಸುಧಾರಣೆ ತರಬೇಕು ಎಂದು ಲ್ಯಾನ್ಸೆಟ್ ಸೂಚಿಸಿದೆ. ಆ್ಯಂಟಿಬಯೋಟಿಕ್‌ಗಳ ಮಿತಿಮೀರಿದ ಬಳಕೆಯು ಅವುಗಳನ್ನು ನಿಷ್ಪರಿಣಾಮಕಾರಿಯಾಗಿ ಮಾಡಬಹುದು ಮತ್ತು ಅವುಗಳಿಗೆ ಪ್ರತಿರೋಧವನ್ನು ಹೆಚ್ಚಿಸಬಹುದು ಎಂದು ಈ ಅಧ್ಯಯನ ಹೇಳಿದೆ.

ಬೇರೆ ದೇಶಗಳಲ್ಲಿ ಕಡಿಮೆ ಬಳಕೆಯಾಗುವ ಆ್ಯಂಟಿಬಯೋಟಿಕ್ ಗಳನ್ನು ನಮ್ಮ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಅಜಿಥ್ರೊಮೈಸಿನ್ ನಂತರ ಸೆಫಿಕ್ಸಿಮ್ ಅನ್ನು ಬಳಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!