ಕೊನೆಗೂ ಸತ್ಯ ರಿವೀಲ್​ ಮಾಡಿದ ನೆಟ್​ಫ್ಲಿಕ್ಸ್​: ವೆಬ್ ಸಿರೀಸ್​ನಲ್ಲಿ ಉಗ್ರರ ಹೆಸರು ನಮೂದು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿರುವ ‘IC 814- ದಿ ಕಂದಹಾರ್ ಹೈಜಾಕ್’ ವೆಬ್​ ಸರಣಿ ವಿವಾದಕ್ಕೆ ಈಡಾಗಿದೆ.

ವಿಜಯ್ ವರ್ಮಾ, ನಾಸಿರುದ್ಧೀನ್ ಶಾ, ಪಂಕಜ್ ಕಪೂರ್ ಸೇರಿದಂತೆ ಕೆಲ ಜನಪ್ರಿಯ ನಟರು ನಟಿಸಿರುವ ‘ಐಸಿ 814’ ವೆಬ್ ಸರಣಿಯಲ್ಲಿ ಭಯೋತ್ಪಾಕರ ಪರ ಸಿಂಪತಿ ಮೂಡುವಂತೆ ಚಿತ್ರಿಸಲಾಗಿದೆ ಮಾತ್ರವಲ್ಲದೆ ಕೆಲವು ಸತ್ಯಗಳನ್ನು ಬೇಕೆಂದೇ ಮೆದುಗೊಳಿಸಲಾಗಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಭಯೋತ್ಪಾದಕರ ನಿಜ ಹೆಸರನ್ನೇ ಮರೆಮಾಚಿ ನಕಲಿ ಹೆಸರನ್ನು ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಇದಾದ ಬಳಿಕ ವೆಬ್ ಸರಣಿಯನ್ನು ಹಿಂಪಡೆಯಬೇಕೆಂಬ ಒತ್ತಾಯವೂ ಜೋರಾಗಿ ಕೇಳಿ ಬಂದಿತ್ತು. ಇದೀಗ ನೆಟ್​ಫ್ಲಿಕ್ಸ್​ ವೆಬ್ ಸರಣಿಯಲ್ಲಿ ಭಯೋತ್ಪಾದಕರ ಹೆಸರನ್ನು ಪ್ರದರ್ಶಿಸಲು ಆರಂಭಿಸಿದೆ.

ವೆಬ್ ಸರಣಿಯಲ್ಲಿ ಅಪಹರಣಕಾರರ ಪಾತ್ರಗಳಿಗೆ ಶಂಕರ್ ಮತ್ತು ಭೋಲಾ ಎಂಬ ನಕಲಿ ಹೆಸರುಗಳನ್ನು (ಕೋಡ್​ನೇಮ್) ಗಳನ್ನು ಬಳಸಲಾಗಿದೆ. ವೆಬ್ ಸರಣಿಯ ಯಾವುದೇ ಹಂತದಲ್ಲಿಯೂ ಅವರ ನಿಜವಾದ ಹೆಸರನ್ನು ಹೇಳಲಾಗಿಲ್ಲ. ಇದೀಗ ಅಪಹರಣಕಾರರ ನಿಜವಾದ ಹೆಸರುಗಳನ್ನು ವೆಬ್​ ಸರಣಿಯ ಆರಂಭದಲ್ಲಿ ತೋರಿಸಲಾಗಿದೆ.

ಭಯೋತ್ಪಾದಕರಾದ ಸನ್ನಿ ಅಹ್ಮದ್ ಖಾಜಿ, ಮಿಸ್ತ್ರಿ ಜೂಹುರ್ ಇಬ್ರಾಹಿಂ, ಶಾಖಿರ್, ಶಾಹಿದ್ ಅಖ್ತರ್ ಶಯೀದ್, ಇಬ್ರಾಹಿಂ ಅಥರ್ ಅವರುಗಳು ವಿಮಾನವನ್ನು ಅಪಹರಣ ಮಾಡಿದ್ದರು. ಇದೀಗ ಇವರ ಹೆಸರುಗಳನ್ನು ವೆಬ್ ಸರಣಿಯ ಆರಂಭದಲ್ಲಿ ಪ್ರದರ್ಶಿಸಲಾಗುತ್ತಿದೆ. ನೆಟ್​ಫ್ಲಿಕ್ಸ್​ ಇಂಡಿಯಾದ ಕಂಟೆಂಟ್ ವೈಸ್ ಪ್ರೆಸಿಡೆಂಟ್ ಮೋನಿಕಾ ಶೇರ್ಗಿಲ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ‘1999 ರ ವಿಮಾನ ಅಪಹರಣದ ಬಗ್ಗೆ ಮಾಹತಿ ಇಲ್ಲದವ ಪ್ರೇಕ್ಷಕರ ಅನುಕೂಲಕ್ಕಾಗಿ ನಾವು ಭಯೋತ್ಪಾದಕರ ನಿಜ ಹೆಸರಿನ ಜೊತೆಗೆ ಅವರ ಕೋಡ್​ ನೇಮ್​ಗಳನ್ನು ಸಹ ಪ್ರದರ್ಶಿಸುತ್ತಿದ್ದೇವೆ. ಕೋಡ್​ ನೇಮ್​ಗಳು ನಿಜವಾದ ಆಪರೇಷನ್​ನಲ್ಲಿ ಬಳಸಲಾಗಿತ್ತು’ ಎಂದು ಹೇಳಿದ್ದಾರೆ.

‘ಐಸಿ 814’ ವೆಬ್ ಸರಣಿಯು 1999 ರಲ್ಲಿ ನಡೆದ ವಿಮಾನ ಅಪಹರಣದ ಕತೆಯನ್ನು ಒಳಗೊಂಡಿದೆ. ಈ ವೆಬ್ ಸರಣಿಯಲ್ಲಿ ಭಯೋತ್ಪಾದಕರನ್ನು ವೈಭವೀಕರಿಸಲಾಗಿದೆ. ಅಪಹರಣ ಪ್ರಕರಣದಲ್ಲಿ ಪಾಕಿಸ್ತಾನ, ಐಎಸ್​ಐ ಗಳ ಕೈವಾಡ ಇಲ್ಲವೆಂಬಂತೆ ಚಿತ್ರೀಕರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಅಲ್ಲದೆ ಘಟನೆ ನಡೆದಾಗ ಭಯೋತ್ಪಾದಕರೊಟ್ಟಿಗೆ ಸಂಧಾನಕ್ಕೆ ತೆರಳಿದ್ದ ಅಜಿತ್ ದೋವಲ್ ಹಾಗೂ ಇತರರನ್ನು ‘ಹೈಲೆಟ್’ ಮಾಡಿಲ್ಲ, ಸಂಧಾನ ದೃಶ್ಯವನ್ನು ಹಾಸ್ಯ ದೃಶ್ಯವೆಂಬಂತೆ ತೋರಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ವೆಬ್ ಸರಣಿಯ ಪ್ರಸಾರ ನಿಲ್ಲಿಸಬೇಕೆಂದು ಒತ್ತಾಯಿಸಿ ದೆಹಲಿ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಹ ಹಾಕಲಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!