ನೆಟ್‌ಫ್ಲಿಕ್ಸ್‌ ಆರ್ಥಿಕ ಮುಗ್ಗಟ್ಟು, ನೀತಿ ಬದಲಿಸಿ ಜಾಹೀರಾತಿಗೆ ಮೊರೆ ಹೋದ ಸಂಸ್ಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಂದಾದಾರರ ಕುಸಿತದಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ನೆಟ್‌ಫ್ಲಿಕ್ಸ್ ಈಗ ನಷ್ಟವನ್ನು ಸರಿದೂಗಿಸಲು ಜಾಹೀರಾತು ಆಧಾರಿತ ಸ್ಟ್ರೀಮಿಂಗ್‌ ಮೊರೆ ಹೋಗಿದೆ. ಈ ಕುರಿತು ಹಿಂದೆಯೇ ಮಾಹಿತಿ ನೀಡಿದ್ದು ಇಂದಿನಿಂದ ಜಾಹಿರಾತು ಆಧಾರಿತ ಶ್ರೇಣಿಯನ್ನು ಪ್ರಾರಂಭಿಸುತ್ತಿದೆ.

ಯುಎಸ್‌ ನಲ್ಲಿ ತಿಂಗಳಿಗೆ 7 ಡಾಲರ್‌, ಇನ್ನುಳಿದ ಕೆಲ ದೇಶಗಳಲ್ಲಿ ಇನ್ನೂ ಕಡಿಮೆ ಚಂದಾದಾರಿಕೆ ಮೊತ್ತದಲ್ಲಿ ಸೇವೆ ನೀಡಲು ಮುಂದಾಗಿದ್ದು ಇದು ಇತರ ಸ್ಟ್ರೀಮಿಂಗ್ ಪ್ರತಿಸ್ಪರ್ಧಿಗಳಾದ Disney+, Hulu, ಮತ್ತು HBO Max ನ ಜಾಹೀರಾತು-ಬೆಂಬಲಿತ ಯೋಜನೆಗಳಿಗೆ ಸರಿಸಮಾನವಾಗಿದೆ.

ಕಂಪನಿಯ ಸಹ CEO ರೀಡ್ ಹೇಸ್ಟಿಂಗ್ಸ್ ಜಾಹೀರಾತುಗಳನ್ನು ತಿರಸ್ಕರಿಸುವುದಾಗಿ ಈ ಹಿಂದೆಯೇ ಹೇಳಿದ್ದರು. ಆದರೆ ಕುಸಿಯುತ್ತಿರುವ ಸ್ಟಾಕ್ ಬೆಲೆ ಮತ್ತು ಚಂದಾದಾರರ ನಷ್ಟಗಳಿಂದಾಗಿ ಕಂಪನಿಯು ತನ್ನ ನೀತಿಯನ್ನು ಪುನಃ ವಿಮರ್ಶಿಸುವಂತಾಗಿದೆ. 2021 ರ ಜೂನ್‌ನಲ್ಲಿ ಟ್‌ಫ್ಲಿಕ್ಸ್‌ನ ಸ್ಟಾಕ್ ಬೆಲೆಯು 66 ಶೇಕಡಾದಷ್ಟು ಕಡಿಮೆಯಾಗಿದೆ. ಆದ್ದರಿಂದ ಕಂಪನಿಯು ನಷ್ಟವನ್ನು ಸರಿದೂಗಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.

ಈ ಜಾಹಿರಾತು ಬೆಂಬಲಿತ ಶ್ರೇಣಿಯು ಕಡಿಮೆ ಬೆಲೆಗೆ ಲಭ್ಯವಾಗಲಿದ್ದು ಸ್ಟ್ರೀಮಿಂಗ್‌ ವೇಳೆ ಜಾಹೀರಾತುಗಳು ಪ್ರದರ್ಶನವಾಗಲಿವೆ. ಅಲ್ಲದೇ ಡೌನ್ಲೋಂಡಿಗ್‌ ಆಯ್ಕೆಯೂ ಕೂಡ ಲಭ್ಯವಿರುವುದಿಲ್ಲ. ಇವುಗಳನ್ನು ಹೊರತುಪಡಿಸಿ ಕೆಲ ಪರವಾನಗಿ ಸಮಸ್ಯೆಗಳಿರುವ ವಿಷಯಗಳೂ ಸಹ ಲಭ್ಯವಿರುವುದಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!