ʼಅವತಾರ್‌ʼ ದಿ ವೇ ಆಫ್‌ ವಾಟರ್‌ ಟ್ರೇಲರ್‌ ಗೆ ಚಿತ್ರಾಭಿಮಾನಿಗಳು ಫಿದಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ಚ
ಚಿತ್ರಜಗತ್ತು ಕಂಡ ಶ್ರೇಷ್ಠ ಚಿತ್ರ ನಿರ್ದೇಶಕ ಜೇಮ್ಸ್‌ ಕ್ಯಾಮರೂನ್‌ 13 ವರ್ಷಗಳ ಕಾಲ ಸಮಯ ತೆಗೆದುಕೊಂಡು ನಿರ್ಮಿಸಿರುವ ದೃಶ್ಯಕಾವ್ಯ ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಚಿತ್ರವು ಈ ವರ್ಷದ ಡಿಸೆಂಬರ್ “ಡಿಸೆಂಬರ್ 16 ರಂದು ತೆರೆಗೆ ಅಪ್ಪಳಿಸಲಿದೆ.
‘ಅವತಾರ್: ದಿ ವೇ ಆಫ್ ವಾಟರ್’ ಬ್ಲಾಕ್‌ಬಸ್ಟರ್ ಚಲನಚಿತ್ರ ಅವತಾರ್‌ನ ಮುಂದುವರಿದ ಭಾಗವಾಗಿದೆ ಜೇಮ್ಸ್ ಕ್ಯಾಮರೂನ್ ರ ಅವತಾರ್ ಚಿತ್ರದ ಮೊದಲ ಆವೃತ್ತಿ 2009 ರಲ್ಲಿ ಬಿಡುಗಡೆಯಾಗಿ 8 ಸಾವಿರ ಕೋಟಿ ಗಳಿಕೆ ಮಾಡಿತ್ತು.

ಟ್ರೇಲರ್‌ ನಲ್ಲಿ ಪಂಡೋರಾ ಜಗತ್ತಿನ ಬೆರಗುಗೊಳಿಸುವ ನೀಲಿ ಸಾಗರದ ಅದ್ಭುತ ದೃಶ್ಯಗಳನ್ನು ತೋರಿಸಲಾಗಿದೆ. ಕ್ಯಾಮರೂನ್ ಮತ್ತು ಜಾನ್ ಲ್ಯಾಂಡೌ ಈ ಚಿತ್ರವನ್ನು ನಿರ್ಮಿಸಿದ್ದಾರೆ, ಇದರಲ್ಲಿ ಜೊಯಿ ಸಲ್ಡಾನಾ, ಸ್ಯಾಮ್ ವರ್ಥಿಂಗ್ಟನ್, ಸಿಗೌರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕ್ಲಿಫ್ ಕರ್ಟಿಸ್ ಮೊದಲಾದ ಖ್ಯಾತ ನಟರು ನಟಿಸಿದ್ದಾರೆ.
ಚಿತ್ರವು ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ  ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!