ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಶೋಗಳು..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶೀಘ್ರದಲ್ಲೇ OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಲೈವ್ ಸ್ಟ್ರೀಮಿಂಗ್ ವೈಶಿಷ್ಟ್ಯ ಬರಲಿದೆ. ನೆಟ್‌ಫ್ಲಿಕ್ಸ್ ಈ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿದೆ. ಟ್ಯಾಲೆಂಟ್ ಶೋಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ ಈ ಮೂಲಕ ವೀಕ್ಷಕರು ಲೈವ್ ಆಗಿ ವೋಟ್ ಮಾಡುವ ಅವಕಾಶ ಲಭ್ಯವಿರಲಿದೆ. ಈ ಮೂಲಕ ಮೊದಲ ಸ್ಟ್ಯಾಂಡ್‌ ಅಪ್ ಕಾಮಿಡಿ ಶೋಗಳನ್ನು ಸ್ಟ್ರೀಮ್ ಮಾಡಲಾಗುತ್ತದೆ. ನೆಟ್‌ಫ್ಲಿಕ್ಸ್ ಬಳಕೆದಾರರನ್ನು ಮೆಚ್ಚಿಸಲು ಹೊಸ ವೈಶಿಷ್ಟ್ಯಗಳನ್ನು ತರಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ, ಪಾಸ್ವರ್ಡ್ ಹಂಚಿಕೆ ಆಯ್ಕೆ ಕೂಡ ತೆಗೆದುಹಾಕಲಾಗುತ್ತದೆ. ಕೈಗೆಟುಕುವ ದರದಲ್ಲಿ ಒಟಿಟಿ ಲಭ್ಯವಾಗುವ ಮತ್ತೊಂದು ಫೀಚರ್‌ ಸಹ ಜಾರಿಗೆ ಬರಲಿದೆ.

ನೆಟ್‌ಫ್ಲಿಕ್ಸ್ ಶೀಘ್ರದಲ್ಲೇ ಡ್ಯಾನ್ಸ್ 100 ಎಂಬ ಟ್ಯಾಲೆಂಟ್ ಶೋ ಅನ್ನು ಸ್ಟ್ರೀಮ್ ಮಾಡಲಿದೆ. ಅಮೆರಿಕದಲ್ಲಿ 300 ಸ್ಟ್ಯಾಂಡ್‌ಅಪ್ ಕಾಮಿಡಿಯನ್‌ಗಳೊಂದಿಗೆ ‘ನೆಟ್‌ಫ್ಲಿಕ್ಸ್ ಈಸ್ ಎ ಜೋಕ್’ ಎಂಬ ಮತ್ತೊಂದು ಪ್ರದರ್ಶನವನ್ನು ಪ್ರಾರಂಭಿಸಲಿದೆ. ‘ಡಿಸ್ನಿ ಪ್ಲಸ್ ಹಾಟ್‌ಸ್ಟಾರ್’ ಈಗಾಗಲೇ ಲೈವ್ ಸ್ಟ್ರೀಮಿಂಗ್ ಸೇವೆಯನ್ನು ಪ್ರಾರಂಭಿಸಿದೆ. ‘ಅಮೆಜಾನ್ ಪ್ರೈಮ್ ವಿಡಿಯೋ’ ಕೂಡ ಲೈವ್ ಸ್ಟ್ರೀಮಿಂಗ್ ಮಾಡುತ್ತಿದೆ. ಹಾಗಾಗಿ ಇದೀಗ ನೆಟ್‌ಫ್ಲಿಕ್ಸ್ ಕೂಡಾ ಈ ವೈಶಿಷ್ಟ್ಯದ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಮತ್ತೊಂದೆಡೆ, ನೆಟ್‌ಫ್ಲಿಕ್ಸ್ ಚಂದಾದಾರರ ಸಂಖ್ಯೆಯು ಕೆಲ ಸಮಯದಿಂದ ಕ್ಷೀಣಿಸುತ್ತಿದೆ. ಚಂದಾದಾರರ ಸಂಖ್ಯೆ ಹತ್ತು ವರ್ಷಗಳಲ್ಲಿ ಎಂದೂ ಕಾಣದ ಮಟ್ಟಕ್ಕೆ ಕುಸಿದಿದೆ. ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ಮೂಲಕ ನೆಟ್‌ಫ್ಲಿಕ್ಸ್ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!