ಉತ್ತರ ಕೊರಿಯಾದಲ್ಲಿ ಒಂದೇ ದಿನ ಕೋವಿಡ್‌ನಿಂದ 8 ಸಾವು:ಅಧಿಕಾರಿಗಳ ಮೇಲೆ ಕೋಪಗೊಂಡ ಕಿಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಕಳೆದೆರಡು ವರ್ಷದಲ್ಲಿ ಒಂದೇಒಂದು ಕೋವಿಡ್‌ ಕೇಸ್‌ ಪತ್ತೆಯಾಗದ ಉತ್ತರ ಕೊರಿಯಾದಲ್ಲಿ ಈಗ ಕೋವಿಡ್‌ ಸೋಂಕು ಸ್ಫೋಟಗೊಂಡಿದ್ದು ದಿನೆ ದಿನೇ ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಕಳೆದ ವಾರದದಿಂದ ಇಲ್ಲಿಯವರೆಗೆ ಒಟ್ಟೂ 3,92,920 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಸೂಕ್ತ ಔಷಧಗಳ ಕೊರತೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅಲ್ಲದೇ ಈಗಾಗಲೇ50 ಮಂದಿ ಸಾವನ್ನಪ್ಪಿದ್ದು ನಿನ್ನೆ  ಒಂದೇ ದಿನದಲ್ಲಿ 8 ಮಂದಿ ತಮ್ಮ ಸೋಂಕಿನಿಂದಾಗಿ ಜೀವ ಕಳೆದು ಕೊಂಡಿದ್ದು ಔಷಧಗಳನ್ನು ಸರಿಯಾಗಿ ಪೂರೈಸದೇ ಇರುವುದಕ್ಕೆ ಅಧಿಕಾರಿಗಳ ಮೇಲೆ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಕೋಪಗೊಂಡಿದ್ದಾರೆ ಎಂದು ಕೋರಿಯನ್‌ ಮಾಧ್ಯವೊಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ದೇಶದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕಿಮ್‌ ದೇಶದ ಮೀಸಲು ಔಷಧಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹಾಗೂ ವೇಗವಾಗಿ ಔಷಧಗಳನ್ನು ವಿರಣೆ ಮಾಡಲು ಶಿಫ್ಟ್‌ ಗಳ ಆಧಾರದಲ್ಲಿ 24 ಗಂಟೆಗಳ ಕಾಲವೂ ಔಷಧಾಲಯಗಳು ಕಾರ್ಯನಿರ್ವಹಿಸುವಂತೆ ಬದಲಾಯಿಸಲು ಅದೇಶ ನೀಡಿದ್ದಾರೆ ಎನ್ನಲಾಗಿದೆ.

ಆದರೆ ತಜ್ಞರು ಹೇಳುವ ಪ್ರಕಾರ ಉತ್ತರ “ಕೊರಿಯಾದ ಆರೋಗ್ಯ ವ್ಯವಸ್ಥೆಯು ಸರಿಯಾಗಿಲ್ಲ. ಇಂಥಹ ಸಂದರ್ಭದಲ್ಲಿ ಕೋವಿಡ್‌ ಸೋಂಕಿನಿಂದ ಉತ್ತರ ಕೊರಿಯಾದಲ್ಲಿ ಅನೇಕ ತೊಂದರೆಯಾಗಲಲಿದೆ.  ಇದುವರೆಗೆ ಎಷ್ಟು ಜನರಿಗೆ ಸೋಂಕು ಹರಡಿದೆ ಎಂಬ ಲೆಕ್ಕಾಚಾರವನ್ನು ಉತ್ತರ ಕೊರಿಯಾ ಸರಿಯಾಗಿ ನೀಡುತ್ತಿಲ್ಲ, ಸೋಂಕು ಮತ್ತೆ ಹಚ್ಚಲು ಅಗತ್ಯವಿರು ಸಾಧನಗಳು ಸರಿಯಾದ ಪ್ರಮಾಣದಲ್ಲಿಲ್ಲ. ಅಲ್ಲದೇ ಚಿಕಿತ್ಸಾ ಸಾಮಗ್ರಿಗಳೂ ಕೂಡ ಸರಿಯಾಗಿ ಲಭ್ಯವಿಲ್ಲ. ಉತ್ತರ ಕೋರಿಯಾ ಇದರಿಂದ ಅನೇಕ ತೊಂದರೆ ಎದುರಿಸಲಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!