September 20, 2026
Sunday, September 20, 2026
spot_img

ವಿಮಾನದಲ್ಲಿ ಕುಳಿತು ರೈಲಿನಂತೆ ಪರೋಟ ಉಪ್ಪಿನಕಾಯಿ ತಿಂದ ಕುಟುಂಬ, ಸಿವಿಕ್‌ ಸೆನ್ಸ್‌ ಎಲ್ಲಿ ಹೋಯ್ತು ಎಂದ ನೆಟ್ಟಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯಾವುದೇ ಲಾಂಗ್‌ ಜರ್ನಿ ಮಾಡಬೇಕು ಎಂದರೆ ಭಾರತೀಯ ಮಹಿಳೆಯರಲ್ಲಿ ಹೊಸ ಎನರ್ಜಿ ಮೂಡುತ್ತದೆ. ಅದರಲ್ಲಿಯೂ ರೈಲಿನಲ್ಲಿ ಪ್ರಯಾಣ ಮಾಡಬೇಕು ಎಂದಾದರೆ ರಾತ್ರಿಯಿಡೀ ಎದ್ದು ಚಪಾತಿ, ಪರೋಟ ಇನ್ನಿತರ ಬೇಗ ಹಾಳಾಗದಂತಹ ತಿನಿಸುಗಳನ್ನು ಮಾಡಿಟ್ಟುಕೊಳ್ಳುತ್ತಾರೆ. ರೈಲಿನಲ್ಲಿ ಮನೆಯವರೆಲ್ಲಾ ಅದನ್ನೇ ತಿಂದು, ರೈಲಿನಲ್ಲಿ ಕುಳಿತ ಅಕ್ಕಪಕ್ಕದವರಿಗೂ ನೀಡೋದನ್ನು ಎಲ್ಲರೂ ನೋಡಿಯೇ ಇರ್ತೀರಿ. ಆದರೆ ವಿಮಾನದಲ್ಲಿ ಹೀಗೆ ಮಾಡೋದನ್ನು ನೋಡಿದ್ದೀರಾ?

ಇಮ್ಯಾಜಿನ್‌ ಕೂಡ ಮಾಡೋಕೆ ಆಗೋದಿಲ್ಲ ಅಲ್ವಾ? ಇಲ್ಲೊಂದು ನಾರ್ಥ್‌ ಇಂಡಿಯನ್‌ ಫ್ಯಾಮಿಲಿ ವಿಮಾನದಲ್ಲಿ ಕುಳಿತು ರೈಲಿನಂತೆ ಕೇಕೆ ಹೊಡೆಯುತ್ತಾ ಎಂಜಾಯ್‌ ಮಾಡುತ್ತಾ ಮನೆಯಿಂದ ತಂದಿರುವ ಊಟವನ್ನು ತಿಂಡಿದ್ದಾರೆ. ಬರೋಬ್ಬರು ಹತ್ತರಿಂದ ಹದಿನೈದು ಜನ ಇರುವ ಫ್ಯಾಮಿಲಿ ಇದಾಗಿದ್ದು, ಎಲ್ಲರೂ ಮನೆಯಿಂದ ತಂದಿದ್ದ ಪರೋಟ, ಉಪ್ಪಿನಕಾಯಿ, ಪನೀರ್‌ ಗ್ರೇವಿ ತಿಂದಿದ್ದಾರೆ. ಇದು ವಿಮಾನದಲ್ಲಿರುವ ಇತರರಿಗೆ ಕಿರಿಕಿರಿಯಾಗಿದೆ.

ವಿಡಿಯೋದಲ್ಲೇನಿದೆ?

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಶೇರ್‌ ಆಗಿದ್ದು, ಇದು ವಿಮಾನವೋ ಅಥವಾ ಲೋಕಲ್‌ ಟೂರಿಸ್ಟ್‌ ಬಸ್‌ ಗೊತ್ತಾಗ್ತಾ ಇಲ್ಲ, ಇಂಡಿಗೋ ವಿಮಾನದಲ್ಲಿ ಇದೆಲ್ಲ ಮಾಡೋಕೆ ಅವಕಾಶ ಇದೆಯಾ ಎಂದು ಪ್ರಶ್ನಿಸಿದ್ದಾರೆ. ಕುಟುಂಬವೊಂದು ಎಂಜಾಯ್‌ ಮಾಡುತ್ತಾ ತಟ್ಟೆಯಲ್ಲಿ ತಿನ್ನುತ್ತಾ ಇರುವ ದೃಶ್ಯ ಇದರಲ್ಲಿದೆ. ಇದಕ್ಕೆ ಹಲವರು ನಮ್ಮ ಜನದ ಸಿವಿಕ್‌ ಸೆನ್ಸ್‌ ಎಲ್ಲಿ ಹೋಗಿದೆ ಎಂದು ಕಮೆಂಟ್‌ ಮಾಡುತ್ತಿದ್ದರೆ, ಕೆಲವರು ಇಡೀ ವಿಮಾನವನ್ನು ಬುಕ್‌ ಮಾಡಿರಬಹುದು ಎನ್ನುತ್ತಿದ್ದಾರೆ. ಇನ್ನೊಬ್ಬರು ಕಮೆಂಟ್‌ ಮಾಡಿ ಇಂಡಿಗೋ ಚೆಕಿಂಗ್‌ ವೇಳೆ ನನ್ನ ಸಣ್ಣ ಸ್ನಾಕ್ಸ್‌ ಡಬ್ಬಿಯನ್ನು ತೆಗೆದುಕೊಂಡಿದ್ರು. ಈಗ ಇಷ್ಟೊಂದು ಊಟವನ್ನು ಒಳಕ್ಕೆ ಬಿಟ್ಟಿದ್ಯಾಕೆ ಎಂದು ಸಿಟ್ಟಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !