ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡದಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದ್ದು, ನೇತ್ರಾವತಿ- ಕುಮಾರಧಾರೆ ಸಂಗಮ ತಾಣ ಉಪ್ಪಿನಂಗಡಿಯಲ್ಲಿ ಉಭಯ ನದಿಗಳು ಅಪಾಯ ಮಟ್ಟದ ಸನಿಹದಲ್ಲಿ ಹರಿಯುತ್ತಿವೆ.
ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಳದ ಎಲ್ಲಾ ಮೆಟ್ಟಿಲುಗಳು ಮುಳುಗಡೆಗೊಂಡಿದ್ದು, ಸಹಸ್ರಲಿಂಗನ ಸನ್ನಿಧಿಯಲ್ಲಿ ಸಂಗಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಂಜಳ ಎಂಬಲ್ಲಿ ಹೆದ್ದಾರಿಗೆ ನೀರು ನುಗ್ಗಿದ್ದು ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ.
ಉಪ್ಪಿನಂಗಡಿ ಪರಿಸರದಲ್ಲಿ ಯಾವುದೇ ಅಪಾಯ ಸಂಭವಿಸದಂತೆ ಜಿಲ್ಲಾಡಳಿತ, ಸ್ಥಳಿಯಾಡಳಿತ ವ್ಯಾಪಕ ಕಟ್ಟೆಚ್ಚರ ವಹಿಸಿದೆ.