ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಖಿಲ್ ಗೆದ್ದಾಕ್ಷಣ ವಿಶ್ರಮಿಸುವ ಪ್ರಯತ್ನ ಮಾಡಲ್ಲ, ರಾಜ್ಯದಲ್ಲಿ ನಡೆಸುತ್ತಿರುವ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಬೇಕು, ನನ್ನ 62 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನೋಡಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಅವರು ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು, ಶಿವಕುಮಾರ್ ತಮ್ಮನ್ನು ತಾವು ಹೆಚ್ ಡಿ ಕುಮಾರಸ್ವಾಮಿಯವರೊಂದಿಗೆ ಹೋಲಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ, ಮಂಡ್ಯ ಚುನಾವಣೆಯಲ್ಲಿ ಗುತ್ತಿಗೆದಾರನ ಮೂಲಕ ಹಣ ಖರ್ಚು ಮಾಡಿ ಕುಮಾರಸ್ವಾಮಿಯನ್ನು ಸೋಲಿಸುವ ಪ್ರಯತ್ನ ಮಾಡಿದರು, ಆದರೆ ಮಂಡ್ಯದ ಜನತೆ ಕುಮಾರಸ್ವಾಮಿ ಪರ ನಿಂತು ಗೆಲ್ಲಿಸಿದರು ಎಂದು ಟಾಂಗ್ ನೀಡಿದ್ದಾರೆ.