May 10, 2026
Sunday, May 10, 2026
spot_img

ಸಿಖ್ಖರ ಕೊಲೆಗೈದ ಕುಟುಂಬದ ಕುಡಿಯೊಂದಿಗೆ ಎಂದಿಗೂ ಕೈಕುಲುಕುವುದಿಲ್ಲ: ರವನೀತ್ ಬಿಟ್ಟು ಖಡಕ್ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನನ್ನು “ದೇಶದ್ರೋಹಿ” ಎಂದು ಕರೆದ ರಾಹುಲ್ ಗಾಂಧಿಗೆ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಖಡಕ್ ತೀರುಗೇಟು ನೀಡಿದ್ದು, ತನ್ನ ತಂದೆ ದೇಶಕ್ಕಾಗಿ ತನ್ನನ್ನು ತ್ಯಾಗ ಮಾಡಿದ್ದಕ್ಕಾಗಿ ತಾನು ಅತ್ಯಂತ ದೊಡ್ಡ ದೇಶಭಕ್ತನೆಂದು ರಾಹುಲ್ ಗಾಂಧಿ ಭಾವಿಸಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬ ಪಂಜಾಬ್‌ಗೆ ಬೆಂಕಿ ಹಚ್ಚಿತ್ತು. ಗೋಲ್ಡನ್ ಟೆಂಪಲ್‌ನಲ್ಲಿರುವ ನಮ್ಮ ಅತಿದೊಡ್ಡ ಗುರುದ್ವಾರದ ಮೇಲೆ ಗುಂಡು ಹಾರಿಸಲಾಯಿತು ಎಂದು ಟೀಕಿಸಿದ್ದಾರೆ.

ನಾನು ಈಗ ಬಿಜೆಪಿಯಲ್ಲಿದ್ದೇನೆ, ಹೀಗಾಗಿ ಅವರು ನನಗೆ ದೇಶದ್ರೋಹಿ ಎಂಬ ಪದಗಳನ್ನು ಬಳಸುತ್ತಿದ್ದಾರೆ. ಆದ್ರೆ ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುವವರೆಗೂ ಅವರಿಗೆ ಎಲ್ಲ ಚೆನ್ನಾಗಿತ್ತು ಎಂದು ಗುಡುಗಿದರು.

ಇದೇ ವೇಳೆ ರಾಹುಲ್ ಗಾಂಧಿಯವರಿಗೆ ಹ್ಯಾಂಡ್‌ಶೇಕ್ ಏಕೆ ನೀಡಲಿಲ್ಲ ಎಂದು ತಿಳಿಸಿದ ಬಿಟ್ಟು, ಸಿಖ್ಖರ ಕೊಲೆಗಾರ ಗಾಂಧಿ ಕುಟುಂಬದ ಕುಡಿಯೊಂದಿಗೆ ಸರ್ದಾರ್ ಎಂದಿಗೂ ಕೈಕುಲುಕುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬ ಸಾವಿರಾರು ಸಿಖ್ಖರು, ಪಂಜಾಬಿಗಳನ್ನು ಗುರಿಯಾಗಿಸಿಕೊಂಡು ಕೊಂದರು. ನಾನು ಕೂಡ ಆ ರೀತಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ಕುಟುಂಬದಿಂದ ಬಂದಿದ್ದೇನೆ, ಇದು ನನ್ನ ನೋವು. ಒಬ್ಬ ಹುತಾತ್ಮನ ಮೊಮ್ಮಗ ನಾನು. ನಾನು ಗಾಂಧಿ ಕುಟುಂಬಕ್ಕೆ ಸೇರಿದವನಲ್ಲದಿರಬಹುದು, ಆದರೆ ನನ್ನ ತಲೆಯ ಮೇಲೆ ಪೇಟವಿದೆ. ಹಾಗಾಗಿ, ಅವರು ನನ್ನೊಂದಿಗೆ ಕೈಕುಲುಕಲು ಮುಂದಾದಾಗ, ನಾನು ‘ಆಪ್ ಲೋಗ್ ತೋ ದೇಶ್ ಕೆ ಗದ್ದರ್ ಹೋ, ದೇಶ್ ಕೆ ದುಷ್ಮನ್ ಹೋ (ನೀವು ದೇಶದ ಶತ್ರುಗಳು)’ ಎಂದು ಹೇಳಿದೆ. ಗಾಂಧಿ ಕುಟುಂಬದಿಂದ ಸಿಖ್ಖರ ಕೊಲೆಯಾಗಿದೆ. ನಾನು ಆ ಕುಟುಂಬದ ಮಗನೊಂದಿಗೆ ಕೈಕುಲುಕುವುದಿಲ್ಲ ಎಂದು ಖಡಕ್ ಆಗಿ ಉತ್ತರಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !