ಮಹಾರಾಷ್ಟ್ರ ಸರ್ಕಾರದಿಂದ ಹೊಸ ಘೋಷಣೆ: ಆಕ್ಸಿಡೆಂಟ್ ಆದವರಿಗೆ 1ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರ ಸರ್ಕಾರ ಇಂದು ಮಹತ್ವದ ಘೋಷಣೆಯೊಂದನ್ನ ಮಾಡಿದೆ. ಅಪಘಾತಕ್ಕೊಳಗಾದವರು ವಿಮಾ ಸೌಲಭ್ಯವಿರುವ ಮತ್ತು ತುರ್ತು ಚಿಕಿತ್ಸಾ ಆಸ್ಪತ್ರೆಗಳಲ್ಲಿ 1 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದೆ.

ಈ ಕುರಿತು ಆರೋಗ್ಯ ಸಚಿವ ಪ್ರಕಾಶ್ ಅಬಿಟ್ಕರ್ ಮಾತನಾಡಿ, ಅಪಘಾತಕ್ಕೊಳಗಾದವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಿ ಮತ್ತು ₹1 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆದ ಬಗ್ಗೆ ಖಚಿತಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಗಳ ಮೂಲಕ ಪಾರದರ್ಶಕವಾಗಿ ಕೈಗೊಳ್ಳಲಾಗುವುದು. ಸಮಿತಿಯು ಈ ಯೋಜನೆಯಡಿ ನೀಡಬಹುದಾದ ಹೆಚ್ಚಿನ ಚಿಕಿತ್ಸೆ, ಅಂಗಾಂಗ ಕಸಿಯಂತಹ ದುಬಾರಿ ಚಿಕಿತ್ಸೆ, ಪ್ರಾಥಮಿಕ ಚಿಕಿತ್ಸೆಗಳ ದರ ಪಟ್ಟಿ ಸೇರಿ ಇತ್ಯಾದಿಗಳ ವರದಿ ನೀಡಲಿದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ದೊರೆಯವ ವಿವಿಧ ಯೋಜನೆಗಳು, ಹಾಸಿಗೆ ಲಭ್ಯತೆ, ದೂರು ದಾಖಲಿಗೆ ಪ್ರತ್ಯೇಕ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗುವುದು. ಜತೆಗೆ ಈ ಆರೋಗ್ಯ ಯೋಜನೆಯ ದುರುಪಯೋಗಪಡಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!