Sunday, February 5, 2023

Latest Posts

ವಿಹಾಹ ಪೂರ್ವ ಸೆಕ್ಸ್ ತಡೆಗೆ ಹೊಸ ಕ್ರಿಮಿನಲ್ ಕಾನೂನು: ಇಂಡೋನೇಷ್ಯಾ ಸರ್ಕಾರದ ವಿರುದ್ಧ ಜನರ ಪ್ರತಿಭಟನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂಡೋನೇಷ್ಯಾ ಸರ್ಕಾರವು ವಿಹಾಹ ಪೂರ್ವ ಸೆಕ್ಸ್ ತಡೆಯಲು ಹೊಸ ಕ್ರಿಮಿನಲ್ ಕಾನೂನು ಅಂಗೀಕರಿಸಿದ್ದು, ಇದೀಗ ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಇದರಿಂದ ವಿವಾಹಪೂರ್ವ ಲೈಂಗಿಕತೆ ಹಾಗೂ ಸಹಬಾಳ್ವೆಯನ್ನು ಕಾನೂನುಬಾಹಿರಗೊಳಿಸುತ್ತದೆ. ಜೊತೆಗೆ ಆಗ್ನೇಯ ಏಷ್ಯಾದಂತಹ ರಾಷ್ಟ್ರಗಳಲ್ಲಿ ಸ್ವಾತಂತ್ರ‍್ಯವನ್ನು ದುರ್ಬಲಗೊಳಿಸಬಹುದು. ಹೀಗಾಗಿ ರದ್ದುಗೊಳಿಸುವಂತೆ ಪ್ರತಿಭಟನೆಗಳು ಶುರುವಾಗಿದೆ.

ಇಂಡೋನೇಷ್ಯಾ ಸರ್ಕಾರವು ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟ ಹೊಸ ಕ್ರಿಮಿನಲ್ ಕಾನೂನು, 1946 ರಲ್ಲಿ ಇಂಡೋನೇಷ್ಯಾ ಸ್ವಾತಂತ್ರ‍್ಯದ ನಂತರ ಜಾರಿಯಲ್ಲಿದ್ದ ಚೌಕಟ್ಟನ್ನು ಮತ್ತೆ ಬದಲಾಯಿಸುತ್ತದೆ. ಈ ಕಾನೂನು ಅಲ್ಲಿನ ಜನರಿಗೆ ಮಾತ್ರವಲ್ಲದೇ ವಿದೇಶಿಯರಿಗೂ ಅನ್ವಯಿಸುತ್ತದೆ.

ವಿವಾಹಪೂರ್ವ ಲೈಂಗಿಕತೆ ತಡೆ ಕಾನೂನು ರೂಪಿಸಲು 2019ರಲ್ಲಿ ಕರಡನ್ನು ಸಿದ್ದಪಡಿಸಲಾಗಿತ್ತು. ಆದರೆ ವ್ಯಾಪಕ ಪ್ರತಿಭಟನೆಗಳಿಂದಾಗಿ ಕಾನೂನು ರೂಪಿಸುವುದನ್ನು ಮುಂದೂಡಲಾಯಿತು. ಈ ಕಾನೂನು ಭಯದ ನಡುವೆ ವೈಯಕ್ತಿಕ ಸ್ವಾತಂತ್ರ‍್ಯವನ್ನು ಮೊಟಕುಗೊಳಿಸುತ್ತದೆ ಎಂದು ಪ್ರತಿಭಟನಾಕಾರರು ದೂರಿದ್ದರು. ಪ್ರತಿಭಟನೆಯಲ್ಲಿ ಸುಮಾರು 300 ಮಂದಿ ಗಾಯಗೊಂಡಿದ್ದರು.

ಕಳೆದ ಒಂದು ವಾರದ ಹಿಂದೆಯಷ್ಟೇ ಇಂಡೋನೇಷ್ಯಾ ಸರ್ಕಾರ ವಿವಾಹಪೂರ್ವ ಸೆಕ್ಸ್ ತಡೆಯಲು ಕಾನೂನು ರೂಪಿಸುತ್ತಿರುವುದಾಗಿ ಹೇಳಿ ಕರಡನ್ನು ಬಿಡುಗಡೆ ಮಾಡಿತ್ತು. ಈ ಕಾನೂನಿನ ಅನ್ವಯ ವಿವಾಹಕ್ಕೆ ಮುಂಚೆ ಸೆಕ್ಸ್ ಮಾಡಿದ್ರೆ, ಒಂದು ವರ್ಷ ಜೈಲು ಹಾಗೂ ಭಾರೀ ಮೊತ್ತದ ದಂಡ ವಿಧಿಸಬಹುದು ಎಂದು ಸರ್ಕಾರ ಹೇಳಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!