10 ಕಿಮೀ ಓಡಿಯೇ ಮನೆ ಸೇರುವ ಯುವಕನಿಗೆ ಸಿಹಿ ಸುದ್ದಿಕೊಟ್ಟ ದೆಹಲಿ ಸರಕಾರ: ತಾಯಿಗೆ ಉಚಿತ ಚಿಕಿತ್ಸೆಯ ಭರವಸೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲಸ ಮುಗಿಸಿ ಮಧ್ಯರಾತ್ರಿ 10 ಕಿಲೋ ಮೀಟರ್​ ಓಡುತ್ತಲೇ ಮನೆ ಸೇರುವ 19 ವರ್ಷದ ಯುವಕ ಪ್ರದೀಪ್ ಮೆಹ್ರಾನ ವಿಡಿಯೋ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್​ ಆಗಿತ್ತು.
ಎಲ್ಲೆಡೆ ಆತನ ಕನಸಿನ ಓಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ಪ್ರದೀಪ್​ ಮೆಹ್ರಾ ತಾಯಿಗೆ ದೆಹಲಿ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುವುದಾಗಿ ಘೋಷಿಸಿದೆ.
ಭಾರತೀಯ ಸೇನೆ ಸೇರುವ ಉದ್ದೇಶದಿಂದ ಯುವಕ ಪ್ರತಿದಿನ 10 ಕಿಲೋ ಮೀಟರ್ ಓಡುತ್ತಲೇ ತನ್ನ ಮನೆ ಸೇರಿಕೊಳ್ಳುತ್ತಿದ್ದ. ಈತನ ತಾಯಿ ಅನಾರೋಗ್ಯಪೀಡಿತರಾಗಿದ್ದು ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಖುದ್ದಾಗಿ ಆತನೇ ವಿಡಿಯೋದಲ್ಲಿ ಹೇಳಿಕೊಂಡಿದ್ದ. ಇದೀಗ ಸಿಎಂ ಅರವಿಂದ್ ಕೇಜ್ರಿವಾಲ್​ ಸರ್ಕಾರ ಸಹಾಯಹಸ್ತ ಚಾಚಿದ್ದು, ಉಚಿತವಾಗಿ ಚಿಕಿತ್ಸೆ ನೀಡುವ ಭರವಸೆ ನೀಡಿದೆ.
ಈಗಾಗಲೇ ಭಾರತೀಯ ಸೇನೆ ಸೇರಲು ಮುಂದಾಗಿರುವ ಪ್ರದೀಪ್​ಗೆ ನಿವೃತ್ತ ಲೆಫ್ಟಿನೆಂಟ್​ ಜನರಲ್​ ಸತೀಶ್ ದುವಾ, ಭಾರತೀಯ ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಕಲ ರೀತಿಯಿಂದಲೂ ತಾವು ಸಹಾಯ ಮಾಡುವುದಾಗಿ ನಿನ್ನೆ ಪ್ರಕಟಿಸಿದ್ದರು. ಸೇನಾ ಕಮಾಂಡರ್​​ ಲೆಫ್ಟಿನೆಂಟ್ ಜನರಲ್​ ರಾಣಾ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದು, ತಮ್ಮ ರೆಜಿಮೆಂಟ್​​ನಲ್ಲಿ ನೇಮಕಾತಿ ಮಾಡಿಕೊಳ್ಳಲು ತರಬೇತಿ ನೀಡುವುದಾಗಿ ತಿಳಿಸಿದ್ದಾಗಿ ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!