July 17, 2026
Friday, July 17, 2026
spot_img

‘ಹೊಸ ಡ್ರೈವರ್, ಹಳೆ ಗಾಡಿ’ ಬದಲಾವಣೆ ಏನೂ ಇಲ್ಲ: ಸರ್ಕಾರದ ಸ್ಥಿತಿಗೆ ಅಶೋಕ್ ವ್ಯಂಗ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾದರೂ ಸರ್ಕಾರದ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ. ನಾಯಕತ್ವ ಬದಲಾವಣೆ ಮಾತ್ರದಿಂದ ಆಡಳಿತದ ಸವಾಲುಗಳು ನಿವಾರಣೆಯಾಗುವುದಿಲ್ಲ ಎಂದು ಅವರು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸಂಸ್ಕೃತಿಯ ವಿರುದ್ಧ ಆರೋಪ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಹಿಂದುಳಿದ ವರ್ಗಗಳ ನಾಯಕರನ್ನು ಪದೇಪದೇ ಕಡೆಗಣಿಸುವ ಪರಂಪರೆ ಮುಂದುವರಿದಿದೆ. ಈ ಸರ್ಕಾರದಲ್ಲಿ ಡ್ರೈವರ್ ಮಾತ್ರ ಬದಲಾವಣೆ ಆಗಿದ್ದಾರೆ. ಬಸ್ ಮತ್ತು ಎಂಜಿನಿ ಕೆಟ್ಟು ಹೋಗಿದೆ ಎಂದು ಆರೋಪಿಸಿದರು. ಹಿಂದೆ ಹಲವು ನಾಯಕರಿಗೆ ಆದ ಅನುಭವವೇ ಈಗ ಪುನರಾವರ್ತನೆಯಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:

ರಾಜ್ಯದ ಸಾಲದ ಬಗ್ಗೆ ಪ್ರಶ್ನೆ

ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ ಅಶೋಕ್, ಸಾಲದ ಪ್ರಮಾಣ ನಿರಂತರವಾಗಿ ಏರಿಕೆಯಾಗುತ್ತಿದೆ ಎಂದು ಆರೋಪಿಸಿದರು. ಆದಾಯಕ್ಕಿಂತ ಸಾಲ ಹೆಚ್ಚಾಗಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರ ಹೊರೆ ಮುಂದಿನ ಪೀಳಿಗೆ ಮೇಲೆ ಬೀಳಲಿದೆ ಎಂದು ಹೇಳಿದರು.

ಅಭಿವೃದ್ಧಿ ಕಾರ್ಯಗಳಿಗೆ ಹಣ ಎಲ್ಲಿಂದ?

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆ ಎದುರಾಗಿದೆ ಎಂದು ಅವರು ದೂರಿದರು. ರಸ್ತೆ, ನೀರಾವರಿ ಹಾಗೂ ಮೂಲಸೌಕರ್ಯ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸುವ ಸವಾಲು ಸರ್ಕಾರದ ಮುಂದಿದೆ ಎಂದು ಪ್ರಶ್ನಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !