Saturday, December 9, 2023

Latest Posts

ನೂತನ ಎಮ್ಮೆಲ್ಸಿ ವೈ.ಎಂ ಸತೀಶ್ ಅವರಿಗೆ ಸನ್ಮಾನ

ಹೊಸದಿಗಂತ ವರದಿ,ಬಳ್ಳಾರಿ:

ನಗರದ ಬಳ್ಳಾರಿ ‌ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನೂತನ ಎಮ್ಮೆಲ್ಸಿ ವೈ.ಎಂ.ಸತೀಶ್ ಅವರನ್ನು ಬೂಡಾ ಅಧ್ಯಕ್ಷ ಕಾರ್ಕಲತೋಟ ಪಾಲನ್ನ ಹಾಗೂ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಸೋಮವಾರ ‌ಸನ್ಮಾನಿಸಿ‌ ಗೌರವಿಸಿದರು. ಕಚೇರಿಗೆ ಭೇಟಿ ‌ನೀಡಿದ ವೇಳೆ ಬೂಡಾ ಅಧ್ಯಕ್ಷ ಕಾರ್ಕಲತೋಟ ‌ಪಾಲನ್ನ‌ ಅವರು ಸೇರಿದಂತೆ ವಿವಿಧ ಮುಖಂಡರು‌ ಹೂ ಗುಚ್ಛ‌ ನೀಡಿ ಆತ್ಮೀಯವಾಗಿ ಸನ್ಮಾನಿಸಿ ‌ಅಭಿನಂದಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಎಮ್ಮೆಲ್ಸಿ ವೈ.ಎಂ.ಸತೀಶ್ ಅವರು‌ ಮಾತನಾಡಿ, ಮತದಾರರು ನಮ್ಮ‌ ಮೇಲೆ ವಿಶ್ವಾಸವಿಟ್ಟು ಕಳೆದ ಚುನಾವಣೆಯಲ್ಲಿ ಬೆಂಬಲಿಸಿ ಆರ್ಶಿವಾದಿಸಿದ್ದು, ಅವರ‌ ನಿರೀಕ್ಷೆಯಂತೆ ಅವಧಿಯಲ್ಲಿ ‌ಮಾದರಿ‌ ಕೆಲಸಗಳನ್ನು ನಿರ್ವಹಿಸುವೆ, ನಾನು ಹೆಚ್ಚು ಮಾತನಾಡೋಲ್ಲ, ನನ್ನ ಅಭಿವೃದ್ಧಿ ಕೆಲಸಗಳೇ ಮಾತನಾಡಲಿವೆ, ಎಲ್ಲರಂತೆ ಭರವಸೆಯ ಮಾತುಗಳನ್ನಾಡಿ ಕಾಲ್ಕಿತ್ತುವ ಜಾಯಮಾನ ನನ್ನದಲ್ಲ, ನಾನು ಯಾವುದೇ ಭರವಸೆ ನೀಡಿದರೂ ಅದನ್ನು ಈಡೇರಿಸುವವರೆಗೂ ಬಿಡುವ ಜಾಯಮಾನ ನನ್ನದಲ್ಲ ಎಂದರು. ಬೂಡಾ ಅಧ್ಯಕ್ಷ ಕಾರ್ಕಲತೊಟ ಪಾಲನ್ನ ಮಾತನಾಡಿ, ಅವಧಿಯಲ್ಲಿ ಬಳ್ಳಾರಿ‌ ನಗರವನ್ನು ನಾನಾ ರೀತಿಯಲ್ಲಿ ‌ಅಭಿವೃದ್ಧಿ ಪಡಿಸಿ ರಾಜ್ಯದಲ್ಲೇ‌ ಬಳ್ಳಾರಿಯನ್ನು ಮಾದರಿಯನ್ನಾಗಿ ಮಾಡುವೆ, ನಗರ ಶಾಸಕರಾದ ಗಾಲಿ ಸೋಮಶೇಖರ್ ರೆಡ್ಡಿ ಅವರು ನಗರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ನೂತನವಾಗಿ ‌ವೈ.ಎಂ.ಸತೀಶ್ ಅವರು ನೂತನವಾಗಿ ಎಮ್ಮೆಲ್ಸಿ ಯಾಗಿ ಆಯ್ಕೆಯಾಗಿದ್ದು ಮತ್ತಷ್ಟು ಬಲ ಬಂದಂತಾಗಿದೆ ಎಂದರು. ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿ, ನಾವು ಯಾವತ್ತು ಹೇಳಿದ್ದನ್ನೇ ಮಾಡುವ ಸ್ವಭಾವ ನಮ್ಮದು, ಕೈ‌ ನಾಯಕರಂತೆ ಸಭೆ ಸಮಾರಂಭಗಳಲ್ಲಿ ಮಾರುದ್ದ ಭಾಷಣ ಬಿಗಿದು ‌ಕೈತೊಳೆಯುವ ಜಾಯಮಾನ ನಮ್ಮದಲ್ಲ, ಅವಧಿಯಲ್ಲಿ ಎಲ್ಲರೂ ಸೇರಿ ಬಳ್ಳಾರಿಯ ಅಭಿವೃದ್ಧಿಗೆ ಶ್ರಮಿಸಲಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ವೀರಶೇಖರ್ ರೆಡ್ಡಿ, ಶ್ರೀನಿವಾಸ್ ‌ಮೋತ್ಕರ್, ಕೃಷ್ಣಾ ರೆಡ್ಡಿ, ಬೂಡಾ ಅಧಿಕಾರಿಗಳು ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!