Wednesday, June 7, 2023

Latest Posts

ವಾಟ್ಸಪ್‌ನಲ್ಲಿ ಕಳುಹಿಸಿದ ಮೆಸೇಜ್ ಎಡಿಟ್ ಮಾಡೋಕು ಬಂದಿದೆ ಹೊಸ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಎಂದರೆ ವಾಟ್ಸಪ್. ಇದೀಗ ಅತ್ಯಂತ ನಿರೀಕ್ಷಿತ ಫೀಚರ್ ಒಂದನ್ನು ವಾಟ್ಸಪ್‌ ಪರಿಚಯಿಸಿದೆ. ಅದೇನೆಂದರೆ ಬಳಕೆದಾರರು ತಮ್ಮ ಸ್ನೇಹಿತರಿಗೆ ತಪ್ಪಾಗಿ ಕಳುಹಿಸಿದ ಸಂದೇಶವನ್ನು ಎಡಿಟ್ ಮಾಡಲು ಹೊಸ ಆಯ್ಕೆಯನ್ನು ನೀಡಿದೆ.

ಈ ಹಿಂದೆ ವಾಟ್ಸಪ್‌ನಲ್ಲಿ ಬಳಕೆದಾರರು ತಪ್ಪಾಗಿ ಸಂದೇಶವನ್ನು ಕಳುಹಿಸಿದ್ದಲ್ಲಿ ಅದನ್ನು ನೇರವಾಗಿ ಡಿಲೀಟ್ ಮಾಡಲು ಆಯ್ಕೆ ನೀಡಲಾಗಿತ್ತು. ಆದರೆ ಈಗ ಬಳಕೆದಾರರು ಆ ಸಂದೇಶವನ್ನು ಡಿಲೀಟ್‌ ಮಾಡುವ ಅಗತ್ಯವಿಲ್ಲ. ಬದಲಾಗಿ ಸಂದೇಶವನ್ನು ಎಡಿಟ್ ಮಾಡುವ ಮೂಲಕ ತಪ್ಪನ್ನು ಸರಿಪಡಿಸಬಹುದು.

ವಾಟ್ಸಪ್ ನಲ್ಲಿ ಕಳುಹಿಸಿದ ಸಂದೇಶಗಳಲ್ಲಿನ ಅಕ್ಷರ ತಪ್ಪುಗಳಿಂದ ಹಿಡಿದು ಹೆಚ್ಚಿನ ಪದಗಳನ್ನು ಸೇರಿಸುವವರೆಗೂ ಎಡಿಟ್ ಮಾಡಲು ಅವಕಾಶ ನೀಡುತ್ತಿದೆ. ಸಂದೇಶಗಳನ್ನು ಎಡಿಟ್ ಮಾಡಲು ಮೊದಲು ಸಂದೇಶದ ಮೇಲೆ ದೀರ್ಘವಾಗಿ ಒತ್ತಿ. ನಂತರ ಮೆನುವಿನಲ್ಲಿ ಕಾಣಿಸುವ ಎಡಿಟ್ ಆಯ್ಕೆಯನ್ನು ಬಳಸಿದರೆ ಸುಲಭವಾಗಿ ಸಂದೇಶವನ್ನು ತಿದ್ದಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!